ಸುಳ್ಳು ಸುದ್ದಿ ಪ್ರಕಟಿಸಿದರೆ ಪತ್ರಕರ್ತರ ಮಾನ್ಯತೆ ರದ್ದು!

Reporters to lose accreditation for spreading fake news

03-04-2018

ಬೆಂಗಳೂರು: ಸುಳ್ಳು ಸುದ್ದಿ ಸೃಷ್ಟಿಸುವ ಮತ್ತು ಹರಡುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪತ್ರಕರ್ತರಿಗೆ ನೀಡುವ ಮಾನ್ಯತೆಯ ಮಾರ್ಗಸೂಚಿಯನ್ನು ಬದಲಿಸಿದೆ.

ಪತ್ರಿಕೆಗಳಲ್ಲಿ ಪ್ರಕಟವಾದ ಸುಳ್ಳು ಸುದ್ದಿ ಕುರಿತು ಬರುವ ದೂರನ್ನು ಪ್ರೆಸ್ ಕೌನ್ಸಿಲ್ (ಪಿಸಿಐ) ಹಾಗೂ ಎಲೆಕ್ಟ್ರಾನಿಕ್ ಮೀಡಿಯಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳನ್ನು ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್ ಗೆ ಕಳುಹಿಸಲಾಗುವುದು. ದೂರು ಬಂದ 15 ದಿನಗಳಲ್ಲಿ ಈ ಸಂಸ್ಥೆಗಳು ಸುಳ್ಳುಗಳ ಸತ್ಯಾಸತ್ಯವನ್ನು ಪರಿಶೀಲಿಸಬೇಕು. ಆವರೆಗೆ ಸುಳ್ಳು ಸುದ್ದಿ ಪ್ರಕಟಿಸಿದ ಪತ್ರಕರ್ತರ ಮಾನ್ಯತೆ ಅಮಾನತ್ತಿನಲ್ಲಿರಲಿದೆ.

ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ಬಾರಿಗೆ ಆರು ತಿಂಗಳ ಮಟ್ಟಿಗೆ ಮತ್ತು ಎರಡನೇ ಬಾರಿಗೆ ಒಂದು ವರ್ಷದ ಮಟ್ಟಿಗೆ ಮಾನ್ಯತೆ ರದ್ದು ಮಾಡಲಾಗುವುದು. ಮೂರನೇ ಬಾರಿಗೂ ಅದೇ ಚಾಳಿ ಮುಂದುವರಿದರೆ ಶಾಶ್ವತವಾಗಿ ಮಾನ್ಯತೆ ರದ್ದು ಮಾಡಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆ ತಿಳಿಸಿದೆ.

ಯಾವುದೇ ಸುದ್ದಿ ಮಾಧ್ಯಮ ಸಂಸ್ಥೆಯ ಮಾನ್ಯತೆ ಮನವಿಗೆ ಸಂಬಂಧಿಸಿದಂತೆ ಪ್ರೆಸ್ ಇನ್ ಫರ್ಮೆಷನ್ ಬ್ಯೂರೋದ ಮಾನ್ಯತೆ ಸಮಿತಿಯು ನಿರ್ಧಾರ ಕೈಗೊಳ್ಳುತ್ತದೆ. ಈ ಸಮಿತಿ ಪಿಸಿಐ ಮತ್ತು ಎನ್ ಬಿಎ ಪ್ರತಿನಿಧಿಗಳನ್ನು ಒಳಗೊಂಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ