‘ಧರ್ಮ ಒಡೆಯುವ ಕೆಲಸ ಮಾಡಬಾರದಿತ್ತು’

shiva yogi mandir  sanganabava swamiji reaction on amit shah vist

03-04-2018

ಬಾಗಲಕೋಟೆ: ಶಿವಯೋಗ ಮಂದಿರಕ್ಕೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಷಾ ಭೇಟಿ ವಿಚಾರದ ಕುರಿತು, ಪ್ರತಿಕ್ರಿಯಿಸಿರುವ ಶಿವಯೋಗ ಮಂದಿರದ ಅಧ್ಯಕ್ಷ ಸಂಗನಬಸವ ಸ್ವಾಮೀಜಿ, ಶಿವಯೋಗ ಮಂದಿರ ಒಂದು ರಾಜಕೀಯೇತರ ಸಂಸ್ಥೆ, ಇಲ್ಲಿಗೆ ಯಾರೂ ಬೇಕಾದರೂ ಭೇಟಿ ಮಾಡ್ತಾರೆ. ಹಿಂದೆ ಸೋನಿಯಾ ಗಾಂಧಿ, ಎಲ್.ಕೆ. ಅಡ್ವಾಣಿ ಭೇಟಿ ನೀಡಿದ್ದರು ಎಂದರು.

ಶಿವಯೋಗ ಮಂದಿರಕ್ಕೆ ಎಲ್ಲಾ ಪಕ್ಷಗಳಿಗೂ ಮುಕ್ತ ಅವಕಾಶ ಇದೆ. ಮುಂದೆ‌ ರಾಹುಲ್ ಗಾಂಧಿನೂ ಬರಬಹುದು ಎಂದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ‌ಮಾನ್ಯತೆ ನೀಡಬಾರದು ಅಂತ ಮನವಿ ಮಾಡುತ್ತೇವೆ, ಅದು ನಮ್ಮ ನೈತಿಕ ಹಕ್ಕು, ಅಮಿತ್ ಷಾ ಗೆ ಸ್ವಾಮೀಜಿಗಳು ಮನವಿ ಸಲ್ಲಿಸುತ್ತೇವೆ, ಪ್ರತ್ಯೇಕ ಲಿಂಗಾಯತ ಹೋರಾಟಕ್ಕೆ ನಿಂತವರೇ ಲಿಂಗಧಾರಣೆ ಮಾಡಿಲ್ಲ, ಲಿಂಗಧಾರಣೆ ಅಂದರೆ ಅವರಿಗೆ ಏನೂ ಗೊತ್ತಿಲ್ಲ, ಅಂತಹವರು ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಕೇಳುತ್ತಿದ್ದಾರೆ ಎಂದು, ಸಚಿವ ವಿನಯ ಕುಲಕರ್ಣಿ, ಎಂ.ಬಿ ಪಾಟಿಲ್, ಬಸವರಾಜ ಹೊರಟ್ಟಿ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.

ಲಿಂಗಧಾರಣೆ ಮಾಡದವರಿಂದ ಬಸವಣ್ಣನವರ ಉಪದೇಶ ಕಲಿಯಬೇಕಾಗಿಲ್ಲ, ನಾವು ಶೋಷಣೆಯ ವಿರುದ್ಧ ಇದ್ದವರು, ಸಿದ್ದರಾಮಯ್ಯ ಇಂತಹ ನಿರ್ಧಾರ ತೆಗೆದುಕೊಂಡಿದ್ದು ತಪ್ಪು, ಚುನಾವಣೆಯ ಹೊಸ್ತಿಲಲ್ಲಿ ಧರ್ಮ ಒಡೆಯುವ ಕೆಲಸ ಮಾಡಬಾರದಿತ್ತು ಎಂದು ಅಭಿಪ್ರಾಯ ಪಟ್ಟರು. ಇಂದು ನಡೆಯುವ ಸಭೆಯಲ್ಲಿ ಪಂಚಪೀಠಾದೀಶರು ಸೇರಿದಂತೆ ನೂರಾರು ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

amit shah Lingayat ಸ್ವಾಮೀಜಿ ಧರ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ