ಬಿಲ್ಡಿಂಗ್ ಮೇಲಿಂದ ಬಿದ್ದು ಕಳ್ಳನ ಸಾವು

Thief fallen from building and died

02-04-2018

ಬೆಂಗಳೂರು: ಬೆಳ್ಳಂದೂರಿನ ಸರ್ಜಾಪುರ ರಸ್ತೆಯಲ್ಲಿನ ಪಿಜಿ ವಸತಿಗೃಹವೊಂದರಲ್ಲಿ ಯುವತಿಯರು ಕೂಗಿ ಕೊಂಡಿದ್ದರಿಂದ ಹೆದರಿದ ಕಳ್ಳನೊಬ್ಬ 4ನೇ ಮಹಡಿಯಿಂದ ಬೇರೊಂದು ಕಟ್ಟಡಕ್ಕೆ ಹಾರಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

ಸುಮಾರು 30 ವರ್ಷ ವಯಸ್ಸಿನವನಾದ ಮೃತಪಟ್ಟ ಕಳ್ಳನ ಆತ ಹೆಸರು, ವಿಳಾಸ ಪತ್ತೆಯಾಗಿಲ್ಲ. ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿಯ ಲಕ್ಷ್ಮೀನಾರಾಯಣ ಯುವತಿಯರ ವಸತಿಗೃಹಕ್ಕೆ ಮುಂಜಾನೆ ಮೂರು ಗಂಟೆ ವೇಳೆಯಲ್ಲಿ ಬಂದಿರುವ ಕಳ್ಳ 4ನೇ ಮಹಡಿಯಲ್ಲಿ ಒಳಗೆ ನುಗ್ಗಿ ಮೊಬೈಲ್, ಲ್ಯಾಪ್‍ಟ್ಯಾಪ್ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಲು ಮುಂದಾಗಿದ್ದಾನೆ. ಕಳ್ಳನನ್ನು ನೋಡಿದ ಯುವತಿಯರು ರಕ್ಷಣೆಗಾಗಿ ಕೂಗಿ ಕೊಂಡಿದ್ದರಿಂದ ಪರಾರಿಯಾಗಲು ಯತ್ನಿಸಿ ನಾಲ್ಕನೇ ಮಹಡಿಯ ಮೇಲ್ಛಾವಣೆಯ ಮತ್ತೊಂದು ಕಟ್ಟಡಕ್ಕೆ ಹಾರಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದಾನೆ.


ಸಂಬಂಧಿತ ಟ್ಯಾಗ್ಗಳು

suicide mobile ರಕ್ಷಣೆ ಲ್ಯಾಪ್‍ಟ್ಯಾಪ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ