ಮರ ಕಡಿದು ಬೆಂಕಿ ಹಚ್ಚಿದವರ ವಿರುದ್ಧ ದೂರು

complaint lodged against a company for cutting a tree and burnt

02-04-2018

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಆಕ್ಸೆಂಚರ್ ಕಂಪನಿ ಸಿಬ್ಬಂದಿ, ಮರ ಕಡಿದು ಮರದ ಬುಡಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಆಕ್ಸೆಂಚರ್ ಕಂಪೆನಿ ಸಿಬ್ಬಂದಿ ಈ ದರ್ಪದ ವರ್ತನೆ ತೋರಿದ್ದು, ಇಪ್ಪತ್ತು ವರ್ಷ ಹಳೆಯ ಮರಕ್ಕೆ ಬೆಂಕಿಯಿಟ್ಟು ಮರದ ಮಾರಣ ಹೋಮ ನಡೆಸಿದ್ದಾರೆ. ಕಂಪೆನಿ ಬೋರ್ಡ್ ಕಾಣೋದಕ್ಕಾಗಿ ಅರಣ್ಯ ಘಟಕದ ಅನುಮತಿ ಇಲ್ಲದೇ ಮರ ಕಡಿದಿದ್ದಾರೆ. ವಕೀಲ ಉಮೇಶ್ ಎಂಬವರು ಬಿಟಿಎಂ ಲೇಔಟ್ ಠಾಣೆಯಲ್ಲಿ ಆಕ್ಸೆಂಚರ್ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

tree Burnt ಬೋರ್ಡ್ ಆಕ್ಸೆಂಚರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ