'ನನ್ನ ‌ವಿರುದ್ದ ಸಿಬಿಐ ತನಿಖೆಯಾಗಲಿ'- ಜಮೀರ್ ಅಹ್ಮದ್

Zamir Ahmed press meet in KPCC office

02-04-2018

ಬೆಂಗಳೂರು: ನಾನು ಹಣ ಮಾಡಿದ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಇತ್ತೀಚೆಗೆ ಕಾಂಗ್ರೆಸ್  ಪಕ್ಷ ಸೇರಿದ ಜಮೀರ್ ಅಹಮದ್ ಖಾನ್ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಎದುರು ಕರ್ನಾಟಕ ಮುಸ್ಲಿಂ ಸಾಕಾಗಲ್ಲ. ಜಮ್ಮು ಕಾಶ್ಮೀರ್ ಮಾಜಿ ಸಿಎಂ ಫಾರಕ್ ಅಬ್ದುಲ್ ಕರೆಸಿ ಚುನಾವಣೆಯಲ್ಲಿ ನನ್ನ ವಿರುದ್ದ ನಿಲ್ಲಿಸಲಿ, ಆದರೂ ನಾನು ಗೆಲ್ಲುತ್ತೇನೆ ಎಂದು ಜಮೀರ್ ಸವಾಲು ಹಾಕಿದರು.

ನಾನು ನಾಲ್ಕುವರೆ ಅಡಿ ಇದ್ದೀನಿ ಅಂತ ಅಂದಿದ್ದಾರೆ. ಸಚಿನ್ ತೆಂಡೂಲ್ಕರ್ ಎಷ್ಟು ಹೈಟ್ ಇದ್ದಾರೆ. ಅಮಿತಾಭ್ ಬಚ್ಚನ್ ಎಷ್ಟು ಹೈಟ್ ಇದ್ದಾರೆ. ಅಮಿತಾಭ್ ಬಚ್ಚನ್ ಗಿಂತ ಸಚಿನ್ ಫೇಮಸ್ ಅಲ್ವಾ?ಎಂದು ಜಮೀರ್ ಪ್ರಶ್ನಿಸಿದರು.

ವಿಧಾನಪರಿಷತ್ ಸದಸ್ಯ ಶರವಣ ರಾಜಕಾರಣಿನೇ ಅಲ್ಲ, ಅವರ ಬಗ್ಗೆ ನಾನು ಮಾತನಾಡಲ್ಲ. ಚಿನ್ನದ ವ್ಯಾಪಾರ ಮಾಡ್ಕೊಂಡು ದೇವೇಗೌಡರ ಮಕ್ಕಳ‌ ಜೊತೆ ಇದ್ದು ಎಂ.ಎಲ್.ಸಿ ಆಗಿದ್ದಾರೆ ಎಂದು ಟೀಕಿಸಿದರು. ನಾನು ಚುನಾವಣೆಯಲ್ಲಿ ಸೋತರೇ ನನ್ನ ಕತ್ತು ಕತ್ತರಿಸಿ ನಿಮ್ಮ ಮುಂದೆ ಇಡುತ್ತೇನೆ ಎಂದು ಜಮೀರ್ ಸವಾಲು ಹಾಕಿದರು. ನಾನೇದರೂ ಅಲ್ತಾಫ್ ಖಾನ್ ಕಾಲು ಹಿಡಿದುಕೊಂಡು ಸಹಾಯ ಕೇಳಿದ್ದು ಸಾಬೀತು ಮಾಡಿದರೆ, ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. ನನ್ನ ಆಸ್ತಿ 300 ಕೋಟಿ ರೂಪಾಯಿ ಅಲ್ಲ, 1000 ಕೋಟಿ ರೂಪಾಯಿ ಅಂದರೂ ತೊಂದರೆ ಇಲ್ಲ. ಬೇಕಿದ್ದರೆ ಸಿಬಿಐ ಮುಖಾಂತರ ತನಿಖೆ ಮಾಡಿಸಲಿ ಎಂದು ಜಮೀರ್‌ ಅಹಮದ್‌ ಸವಾಲು ಹಾಕಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ