ವ್ಯಕ್ತಿಯೊಬ್ಬ ಬೈಕ್ ನಲ್ಲಿ ಪಿಎಸ್ಐಗೆ ಗುದ್ದಿ ಪರಾರಿ

Hit and run on psi at bangalore: Psi hospitalised

02-04-2018

ಬೆಂಗಳೂರು: ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ತಪಾಸಣೆ ವೇಳೆ ಬೈಕ್ ಸವಾರನೊಬ್ಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಿಕ್ಕಿಯಿಂದ ಹೆಚ್‍ಎಸ್‍ಆರ್ ಲೇಔಟ್ ಸಂಚಾರ ಠಾಣೆ ಪಿಎಸ್‍ಐ ರವೀಂದ್ರ ರಾವ್‍ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಚಾರ ಪೊಲೀಸರು ತಪಾಸಣೆ ವೇಳೆ ಪೊಲೀಸರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಪರಾರಿಯಾಗಿದ್ದಾರೆ.

ಬೈಕ್ ಸವಾರರು ಕಾನೂನು ಉಲ್ಲಂಘಿಸಿದ್ದು, ಪೊಲೀಸ್ ಸಬ್ ಇನ್ಸ್ಪೆಪೆಕ್ಟರ್ ದಂಡ ವಿಧಿಸುತ್ತಿದ್ದರು. ಇದೇ ವೇಳೆ ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದೇ ಬಂದಿದ್ದ. ಆಗ ಬೈಕ್ ಸವಾರನನ್ನು ಹಿಡಿಯಲು ಹೋದಾಗ ಬೈಕ್ ಸವಾರರು ಟ್ರಾಫಿಕ್ ಪಿಎಸ್‍ಐ ರವೀಂದ್ರ ಅವರಿಗೆ ಗುದ್ದಿದ್ದಾರೆ. ಕೂಡಲೆ ಗಾಯಗೊಂಡ ಪಿಎಸ್‍ಐ ರವೀಂದ್ರ ರಾವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

Biker Accident ಚಿಕಿತ್ಸೆ ಪಿಎಸ್‍ಐ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ