1ಕೋಟಿ ನಗದು, ಅಗಾಧವಾದ ಮದ್ಯ ಜಪ್ತಿ

election officers seized 1 crore of cash and liquor

02-04-2018

ಬೆಂಗಳೂರು: ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವ ಚುನಾವಣಾ ಆಯೋಗ ರಾಜ್ಯದಲ್ಲಿ ಇದುವರೆಗೂ 1 ಕೋಟಿ ರೂಪಾಯಿ ನಗದು, ಮದ್ಯ, ಚಿನ್ನಾಭರಣವನ್ನು ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಾಟ ಮಾಡುತ್ತಿದ್ದ 1,12,90,720 ರೂಪಾಯಿ ನಗದು, 18.9 ಲೀಟರ್ ಮದ್ಯ, 18 ಸೀರೆಗಳು ಮತ್ತು 19,17,000 ರೂಪಾಯಿ ಮೌಲ್ಯದ 2.4 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಕಾರೊಂದರಿಂದ 14,11,000 ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದೆ. ಜೊತೆಗೆ ರಾಜಾದ್ಯಂತ ಪ್ರಚಾರದ ಪೋಸ್ಟರ್‍ಗಳನ್ನು ತೆರವುಗೊಳಿಸಲಾಗಿದೆ. ಇದಲ್ಲದೇ, ಹೆಚ್ಚುವರಿಯಾಗಿ ಅಬಕಾರಿ ಇಲಾಖೆಯಿಂದ 704.13 ಲೀಟರ್ ಮದ್ಯ ಜಪ್ತಿ ಮಾಡಿಕೊಳ್ಳಲಾಗಿದೆ. ಅಬಕಾರಿ ಪರವಾನಿಗೆ ಉಲ್ಲಂಘನೆ ಆರೋಪದಡಿ 69 ಪ್ರಕರಣಗಳು, ಕರ್ನಾಟಕ ಅಬಕಾರಿ ಕಾಯ್ದೆ 1965ರಡಿ 98 ಕೇಸ್‍ಗಳು ದಾಖಲಾಗಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.


ಸಂಬಂಧಿತ ಟ್ಯಾಗ್ಗಳು

liquor money ಅಬಕಾರಿ ಅಕ್ರಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ