ತಾ.ಪಂಚಾಯತಿ ಸದಸ್ಯೆ ಪತಿಯಿಂದ ದಾಂಧಲೆ

Temple belongings destroyed by drunk man

02-04-2018

ತುಮಕೂರು: ಕುಡಿದ ಮತ್ತಿನಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯೆಯ ಪತಿ ದಾಂಧಲೆ ನಡೆಸಿದ್ದಾನೆ. ಗ್ರಾಮದ ದಂಡಿನಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ತಂದಿದ್ದ ಗ್ರಾನೈಟ್, ಕಿಟಕಿಗಾಜು ಪುಡಿ ಪುಡಿ ಮಾಡಿ ವಿಕೃತಿ ಮೆರೆದಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮದಲ್ಲಿ ಘಟನೆ ನಡೆದಿದ್ದು, ಗುಬ್ಬಿ ತಾಪಂ ಸದಸ್ಯೆ ಸುಧಾಮಣಿ ಪತಿ ಚಿಕ್ಕತಿಮ್ಮಯ್ಯ ಈ ಕೃತ್ಯ ಎಸಗಿದ್ದಾನೆ. ಸುಮಾರು ಮೂರು ಲಕ್ಷ ಮೌಲ್ಯದ ಗ್ರಾನೈಟ್, ಕಿಟಕಿಗಾಜು ಪುಡಿಪುಡಿ ಮಾಡಿ ನಷ್ಟ ಮಾಡಿದ್ದಾನೆ. ಚಿಕ್ಕತಿಮ್ಮಯ್ಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌


ಸಂಬಂಧಿತ ಟ್ಯಾಗ್ಗಳು

Zilla panchayath Temple ಕಿಟಕಿಗಾಜು ಗ್ರಾಮಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ