ಹಂಚಲು ತಂದಿದ್ದ ಕುಕ್ಕರ್ ಗಳು ವಶ

31-03-2018
ಬೆಳಗಾವಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರನ್ನು ಓಲೈಸಿಕೊಳ್ಳಲು, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಕ್ಕುಕ್ಕರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಹೊಂದಿರುವ ಒಂದು ಲೋಡ್ ಲಾರಿಯಷ್ಟು ಕ್ಕುಕ್ಕರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಮುಖಂಡ ಅನಿಲ್ ಬೆನಕೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅನಿಲ್ ಬೆನಕೆ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನಾರಾಜ್ ನಡುವೆ ವಾಗ್ವಾದವೂ ನಡೆಯಿತು. ಅನಿಲ್ ಬೆನಕೆ ಜೊತೆಗೆ ಮಾತಿನ ಚಕಮಕಿ ನಡೆಸಿ ಲಾರಿಯನ್ನು ಕೊಂಡೊಯ್ಯವ ಯತ್ನ ನಡೆಯಿತಾದರೂ, ಅಷ್ಟರಲ್ಲಾಗಲೇ ಸ್ಥಳಕ್ಕಾಗಮಿಸಿದ ಪೊಲೀಸರ ಲಾರಿಯನ್ನು ತಡೆಹಿಡಿದು ಕ್ರಮ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ