ಚಾಮುಂಡೇಶ್ವರಿ ಕ್ಷೇತ್ರದತ್ತ ಸಿಎಂ..

cm siddaramaiah campaign in chamundeshwari constituency

31-03-2018

ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಕೆಲಸಗಳಿಲ್ಲದೇ ರಿಲ್ಯಾಕ್ಸ್ ಮೂಡಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆಯಷ್ಟೇ ಬಂಡಿಪುರ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆದು ಇಂದು ಬೆಳಿಗ್ಗೆ ಮೈಸೂರಿಗೆ ಆಗಮಿಸಿದ್ದಾರೆ.

ಬಲ್ಲಾಳ್ ಸರ್ಕಲ್ ವೃತ್ತದಲ್ಲಿರುವ ಹೋಟೆಲ್ ನಲ್ಲಿ ಸಿಎಂ ಉಪಹಾರ ಸವಿದರು. ಈ ಸಂದರ್ಭ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಇದೀಗ ಮತ್ತೆ ತೆರಳಿ ಜನರ ಜೊತೆ ಮಾತುಕತೆ ನಡಸಿ, ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಲಿದ್ದೇನೆ ಎಂದರು. ನಿಮ್ಮ ಪುತ್ರನ ವಿರುದ್ಧ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಾರಂತಲ್ಲ ಎಂದಿದ್ದಕ್ಕೆ ಚುನಾವಣೆಯಲ್ಲಿ ಯಾರಾದರೂ ಸ್ಪರ್ಧೆ ಮಾಡಬಹುದು. ಯಾರು ಗೆಲ್ಲಬೇಕು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ. ಯಾರು ಒಳ್ಳೆ ಕೆಲಸ ಮಾಡಿದ್ದರೂ ಅವರನ್ನು ವರುಣಾ ಜನತೆ ಹರಸುತ್ತಾರೆ ಎಂದರು.

ಕೆಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಕುರಿತ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅನಂತ್ ಕುಮಾರ್ ಹೆಗಡೆ ಒಬ್ಬ ಮತಾಂಧ. ಅವರ ಬಗ್ಗೆ ನಾನು ಮಾತನಾಡಲ್ಲ‌ ಎಂದರು. ಅವರ ಜೊತೆ ಮಾಜಿ ಶಾಸಕ ಸತ್ಯನಾರಾಯಣ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ವಾಮನಹಳ್ಳಿ ಸಿದ್ದೇಗೌಡ, ಸೇರಿದಂತೆ ಮತ್ತಿತರರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ