ಗದಗ ಜಿಲ್ಲೆಯಾದ್ಯಂತ ರಾತ್ರಿ ಇಡೀ ಭಾರಿ ಮಳೆ

Kannada News

15-05-2017

ಗದಗ ‌.‌..‌

ಗದಗ ಜಿಲ್ಲೆಯಾದ್ಯಂತ ರಾತ್ರಿ ಇಡೀ ಭಾರಿ ಮಳೆ...

ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು...

ನೀರಿನ ರಭಸಕ್ಕೆ ಹಳ್ಳಕ್ಕೆ ಉರುಳಿದ KSRTC ಬಸ್ ಚಾಲಕ, ಕಂಡಕ್ಟರ್ ಸೇರಿ ಐದು ಪ್ರಯಾಣಿಕರು ಬಚಾವ್...

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ದೊಡ್ಡೂರ ಗ್ರಾಮದ ಬಳಿ ಘಟನೆ...

ತುಂಬಿ ಹರಿಯುತ್ತಿರುವ ದೊಡ್ಡೂರ ಹಳ್ಳದಲ್ಲಿ ಬಸ್ ಚಲಾಯಿಸಿದ ಚಾಲಕ...

ಸ್ಥಳೀಯರು ಬೇಡವೆಂದರು ಹಳ್ಳದಲ್ಲಿ ಚಲಾಯಿಸಿದ ಚಾಲಕ ನೀರಿನ ರಭಸಕ್ಕೆ ಹಳ್ಳಕ್ಕೆ ಉರುಳಿದ ಬಸ್..

ಹಗ್ಗದ ಸಹಾಯದಿಂದ ಓರ್ವ ಬಾಲಕ ಸೇರಿ ಐದು ಜನರನ್ನು ರಕ್ಷಿಸಿದ ದೊಡ್ಡೂರ ಗ್ರಾಮಸ್ಥರು...

ಬಸ್ ಹಳ್ಳದಲ್ಲಿ ಬಿದ್ದಾಗ ನಮ್ಮನ್ನು ಬದುಕಿಸಿ ಅಂತ ಪ್ರಯಾಣಿಕರ ಕೂಗಾಟ ಚಿರಾಟ್ ಕೇಳಿ ರಕ್ಷಣೆಗೆ ಧಾವಿಸಿದ  ಸ್ಥಳೀಯರು..

ಲಕ್ಷ್ಮೇಶ್ವರ ದಿಂದ ಯಲ್ಲಾಪುರ ಕ್ಕೆ ಹೊರಟಿದ್ದ ಬಸ್..‌

ಕೆಎ ೨೬ ಎಫ್ ೮೧ ಹಳ್ಳಕ್ಕೆ ಉರುಳಿದ ಬಸ್..

ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ