ಜೆಡಿಎಸ್ ಪ್ರಣಾಳಿಕೆ: ಸಾರ್ವಜನಿಕರ ಸಲಹೆಗೆ ಮನ್ನಣೆ!

JDS Manifesto: they included Public Advice.!

31-03-2018

ಬೆಂಗಳೂರು: ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಾರ್ವಜನಿಕರಿಂದ ಅಪೇಕ್ಷಿಸಲಾದ ಸಲಹೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದ್ದು, ಅದರಲ್ಲಿ ಎರಡು ಪ್ರಮುಖ ಸಂಗತಿಗಳನ್ನು 'ಜನತಾ ಪ್ರಣಾಳಿಕೆ'ಯಲ್ಲಿ ಸೇರಿಸಲಾಗಿದೆ. ಪ್ರಣಾಳಿಕೆ ಸಿದ್ಧಪಡಿಸಲು ಪ್ರಜಾಸತ್ತಾತ್ಮಕ ಮಾದರಿ ಅನುಸರಿಸಿದ ಜೆಡಿಎಸ್ ಪತ್ರಿಕಾ ಜಾಹೀರಾತು ಮತ್ತು ಸಾಮಾಜಿಕ‌ ಜಾಲತಾಣಗಳ ಮೂಲಕ ಸಮಾಜದ ಪ್ರತಿಯೊಬ್ಬರ ಅಭಿಪ್ರಾಯ ಕೇಳಿತ್ತು. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಹಸ್ರಾರು ಜನರು ತಮ್ಮ ಸಲಹೆಗಳನ್ನು ನೀಡಿದ್ದರು. ಅದರಲ್ಲಿ ಪ್ರಮುಖ ಎರಡು ಸಲಹೆಗಳನ್ನು ಜನತಾ ಪ್ರಣಾಳಿಕೆಯಲ್ಲಿ ಸೇರಿಸಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.

1. ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಾಗುವುದು, ವೇತನದಲ್ಲಿರುವ ತಾರತಮ್ಯವನ್ನು ಸರಿಪಡಿಸುವ ಬೇಡಿಕೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಪರಿಗಣಿಸಲಾಗಿದೆ.

2. ಗುತ್ತಿಗೆ ಪದ್ಧತಿಯು ಆಧುನಿಕ ಜೀತ ಪದ್ಧತಿಯೇ ಸರಿ. ಸರಕಾರದ ಎಲ್ಲ ಇಲಾಖೆಗಳಲ್ಲಿನ  ಗುತ್ತಿಗೆ / ತಾತ್ಕಾಲಿಕ ನೌಕರರನ್ನು ಈ ಸಮಸ್ಯೆಯಿಂದ ಮುಕ್ತರನ್ನಾಗಿಸುವ ಸಲುವಾಗಿ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ಅತಿಥಿ ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಎಲ್ಲ ಬಗೆಯ  ತಾತ್ಕಾಲಿಕ ನೌಕರರಿಗೆ ಈ ಕೆಳಗಿನ ಅಂಶಗಳನ್ನು  ಜನತಾ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

> ಎಲ್ಲರಿಗು 60 ವರ್ಷದವರೆಗೆ ಸೇವಾ  ಭದ್ರತೆಯನ್ನು ಒದಗಿಸಲಾಗುವುದು.

> ಗುತ್ತಿಗೆ ನೌಕರರ ಮತ್ತು ಸಮಾನ ಕೆಲಸ ಮಾಡುವ ಸರಕಾರಿ ನೌಕರರ ವೇತನದ  ವ್ಯತಾಸವನ್ನು ಹೋಗಲಾಡಿಸಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡಲಾಗುವುದು.

 > ಎಲ್ಲ ಗುತ್ತಿಗೆ ನೌಕರರನ್ನು ಹಂತ ಹಂತವಾಗಿ ಕಾಯಂಗೊಳಿಸಲು ಇರುವ ಕಾನೂನು ಅಡ್ಡಿಗಳನ್ನು ನಿವಾರಿಸಲು ಸರ್ವಕ್ರಮಗಳನ್ನು ಕೈಗೊಳ್ಳಲಾಗುವ ಅಂಶಗಳನ್ನು ಜೆಡಿಎಸ್ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

manifesto Public ಸರ್ವಕ್ರಮ ಗುತ್ತಿಗೆ ನೌಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ