‘ರೈತ ಪರ ಸರ್ಕಾರಕ್ಕಾಗಿ ಹೋರಾಟ’-ಹೆಚ್ಡಿಕೆ30-03-2018

ಮಂಡ್ಯ: ತನ್ನ ಜೀವನದಲ್ಲಿ ಮರೆಯಲಾಗದ ಮೆರವಣಿಗೆ ಇವತ್ತಿನದು ಎಂದು ನಾಗಮಂಗಲದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ. ಈ ಸಭೆ ಐತಿಹಾಸಿ ಎಂದ ಅವರು, ನನ್ನ ಸ್ವಾರ್ಥಕ್ಕಾಗಿ ಅಧಿಕಾರ ಕೇಳುತ್ತಿಲ್ಲ, ನಿಮ್ಮಂತಹ ಪುಣ್ಯಾತ್ಮರ ಬಾಳಿಗೆ ಉತ್ತಮ ಅಧಿಕಾರ ನೀಡಲು, ಅಭಿವೃದ್ಧಿಗೆ, ರೈತರ ಸಾಲ ಮನ್ನಾ ಮಾಡಲು, ಕಾವೇರಿ ನೀರು ಉಳಿಸಲು, ಮಹದಾಯಿ ನೀರು ಹರಿಸಲು ಅಧಿಕಾರ ಕೇಳುತ್ತಿರುವುದು ಎಂದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಬಿಜೆಪಿಯವರೂ ತಯಾರಿಲ್ಲ ಎಂದು ಕಿಡಿಕಾರಿದ್ದಾರೆ.

ಹೊಸ ಕೃಷಿ ನೀತಿಗೆ ರೈತರು ಮನವಿ ಮಾಡಿದ್ದಾರೆ. ಇಸ್ರೇಲ್‌‌ನ ಕೃಷಿ ವಿಜ್ಞಾನಿಗಳಿಂದ ರೈತರಿಗೆ ತಿಳುವಳಿಕೆ ಕಾರ್ಯಕ್ರಮ ಮಾಡುತ್ತೇನೆ. ನಿಜವಾದ ರೈತ ಸರ್ಕಾರಕ್ಕಾಗಿ ನನ್ನ ಹೋರಾಟ ಎಂದು ಹೇಳಿದ್ದಾರೆ. ನನ್ನ ಬೆನ್ನಿಗೆ ಚೂರಿ ಹಾಕಿ ಹೋದವರ ಬಗ್ಗೆ ಟೀಕೆ ಮಾಡಿದರೆ ಉಪಯೋಗ ಇದ್ಯಾ ಎಂದು ಪ್ರಶ್ನಿಸಿದರು. ಹಿರಿಯೂರಿನಲ್ಲಿ ದುಡ್ಡಿನ ರಾಜಕಾರಣ ನಡೆಯುತ್ತಿದೆ, ಹಣಕ್ಕೆ ಮರಳಾಗಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D kumara swamy conve ಮಹದಾಯಿ ಕಾರ್ಯಕ್ರಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ