'ಬಿಜೆಪಿಗೆ ಯಾರು ಬಂದರೂ ಸ್ವಾಗತ'-ಈಶ್ವರಪ್ಪ

"Whoever comes to the BJP we will welcome"

30-03-2018

ಬೀದರ್: ಬಿಜೆಪಿ ಮುಂದೆ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸದಲ್ಲಿ ಅನೇಕ ರಾಜಕಾರಣಿಗಳು ಬಿಜೆಪಿಗೆ ಬರಲು ಆಸೆಪಡುತ್ತಿದ್ದಾರೆ ಎಂದು, ಬೀದರ್ನಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಬಿಜೆಪಿ ಗಂಗಾ ನದಿ ಇದ್ದ ಹಾಗೆ ಎಂದ ಅವರು, ಪಕ್ಷಕ್ಕೆ ಬರಲು ಯಾರಿಗೂ ವಿರೋಧ ವ್ಯಕ್ತಪಡಿಸುತ್ತಿಲ್ಲ, ಯಾರೂ ಬಂದರೂ ಸ್ವಾಗತ ಎಂದರು. 21 ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತವಾಗಿದೆ, ಕರ್ನಾಟಕ ರಾಜ್ಯ ಕೂಡ ಕಾಂಗ್ರೆಸ್ ಮುಕ್ತವಾಗಿ ಬಿಎಸ್ವೈ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎನ್.ಸಿ.ಸಿ ಅಂದರೆ ಏನು ಅಂತ ಗೊತ್ತಿಲ್ಲದಂತವರನ್ನು ಮುಂದಿನ ಪ್ರಧಾನಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಕಾಲಿಟ್ಟಿದ್ದಾರೋ ಅಲ್ಲಿ ಕಾಂಗ್ರೆಸ್ ಭಸ್ಮವಾಗಿದೆ ರಾಜ್ಯದಲ್ಲೂ ಕಾಂಗ್ರೆಸ್ ಭಸ್ಮ ಆಗಲಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ರಾಜ್ಯದ 224 ಕ್ಷೇತ್ರಗಳ ಪೈಕಿ ಎಲ್ಲಿ ನಿಂತರೂ ಸೋಲು ಗ್ಯಾರಂಟಿ, ಈ ಸೋಲಿನ ಮೂಲಕ ಅವರ ರಾಜಕೀಯ ಜೀವರ ಮುಗಿಯಲಿದೆ, ಇದು ಅವರ ಕೊನೆ ಚುನಾವಣೆ. 'ಬಿಜೆಪಿ ಠುಸ್’ ಎಂದು ವ್ಯಂಗ್ಯವಾಡಿರುವ ಸಿಎಂ ಸಿದ್ದರಾಮಯ್ಯಗೆ ವಿಚಾರವಾಗಿ ತಿರುಗೇಟು ನೀಡಿದ ಈಶ್ವರಪ್ಪ, 21 ರಾಜ್ಯಗಳಲ್ಲಿ ಕಾಂಗ್ರೆಸ್ ಠುಸ್ ಆಗಿದೆ, 22ನೇ ರಾಜ್ಯ ಕರ್ನಾಟಕದಲ್ಲೂ ಡಬಲ್ ಠುಸ್ ಆಗಲಿದೆ ಎಂದರು.

 

 

 

 


ಸಂಬಂಧಿತ ಟ್ಯಾಗ್ಗಳು

K.S.Eshwarappa ganga river ಅಧಿಕಾರ ವಿಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ