ಡಾ.ರಾಮ್ ಜಿ ಅಂಬೇಡ್ಕರ್ ಗೆ ಮೊಮ್ಮಗನ ವಿರೋಧ

prakash ambedkar opposed "Ramji" On BR Ambedkar

30-03-2018

ಬೆಂಗಳೂರು: ಉತ್ತರ ಪ್ರದೇಶ ರಾಜ್ಯ ಸರ್ಕಾರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಡಾ.ರಾಮ್ ಜಿ ಅಂಬೇಡ್ಕರ್ ಎಂದು ಬದಲಿಸಿರುವುದಕ್ಕೆ ಅವರ ಮೊಮ್ಮಗ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯ ನಾಥ್ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

ಅಂಬೇಡ್ಕರ್ ಹೆಸರಿನ ಮುಂದೆ ರಾಮ್ ಜಿ ಎನ್ನುವ ಪದನಾಮ ಸೇರಿಸಿದ್ದು ಯೋಗಿ ಆದಿತ್ಯ ನಾಥ ಸರ್ಕಾರದ ಕೆಟ್ಟ ನಡೆ ಎಂದು ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದಲ್ಲಿ ರಾಮ ಮಂದಿರ ಕಟ್ಟುವ ನೆಪದಲ್ಲಿ ಇಂತಹ ಕಾರ್ಯಕ್ಕೆ ಯೋಗಿ ಸರ್ಕಾರ ಕೈ ಹಾಕಿದೆ ಎಂದು ಟೀಕಿಸಿದರು. ಯಾರಿಂದಲೂ ಭಾರತದ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಕಾಶ್ ಅಭಿಪ್ರಾಯ ಪಟ್ಟರು. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ ಎಂದು ಇದೇ ವೇಳೆ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Dr.B.R.Ambedkar prakash ambedkar ಅಭಿಪ್ರಾಯ ರಾಮ್ ಜೀ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ