ವ್ಯಕ್ತಿ ಕೊಲೆಗೈದು ಅಪಘಾತದ ನಾಟಕ..!

Horrific murder on chintamani highway

30-03-2018

ಬೆಂಗಳೂರು: ಚಿಕ್ಕಬಳ್ಳಾಪುರದ ಚಿಂತಾಮಣಿ ಬಳಿ ಕೆ.ಆರ್.ಪುರಂನ ಯುವಕನೊಬ್ಬನನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಕಾರಿನ ಸ್ಟೇರಿಂಗ್ ಮೇಲೆ ತಲೆಯಿಟ್ಟು ಕುಳ್ಳಿರಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಕೆ.ಆರ್.ಪುರಂನ ರಾಜ್(28)ನನ್ನು ಕೊಲೆ ಮಾಡಿ ಚಿಂತಾಮಣಿ ಸಮೀಪದ ಗಡಿಗವಾರಪಲ್ಲಿ ಗ್ರಾಮದ ಹೊರವಲಯದ ಪೊದೆ ಬಳಿ ನಿಲ್ಲಿಸಿದ್ದ ಇಂಡಿಕಾ ಕಾರಿನ ಚಾಲಕನ ಸೀಟಿನಲ್ಲಿ ಮೇಲೆ ಕೂರಿಸಿ ಸ್ಟೇರಿಂಗ್ ಮೇಲೆ ತಲೆಯಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಆಂಧ್ರ ಮೂಲದವರಾದ ನಟರಾಜ್ ಕೆ.ಆರ್.ಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಅವರನ್ನು ಕರೆತಂದು ಕೊಲೆ ಮಾಡಿರುವ ಕಾರಣಗಳು ಪತ್ತೆಯಾಗಿಲ್ಲ. ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ತಲೆ ಮತ್ತು ಕತ್ತಿನ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದ್ದು, ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲಾಗಿದೆ ಈ ಸಂಬಂಧ ಕೆಂಚಾರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder accident ಪರಿಶೀಲನೆ ಸ್ಟೇರಿಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ