‘ಸ್ಪರ್ಧೆ ಕುರಿತು ಸಧ್ಯಕ್ಕೆ ನಾನೇನೂ ಹೇಳುವುದಿಲ್ಲ’-ವಿಜಯೇಂದ್ರ

BSY’s son Vijayendra visited siddaganga mutt

30-03-2018

ತುಮಕೂರು: ಸಿದ್ದಗಂಗಾ ‌ಮಠಕ್ಕೆ ಬಿಎಸ್ವೈ ಪುತ್ರ ವಿಜಯೇಂದ್ರ ಭೇಟಿ ನೀಡಿದ್ದಾರೆ. ಭೇಟಿಯ ನಂತರ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವರುಣಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಸುಭದ್ರ ಸರ್ಕಾರ ನೀಡುವಲ್ಲಿ ಪ್ರಸ್ತುತ ರಾಜ್ಯ‌ಸರ್ಕಾರದ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ‌ನವರನ್ನ ಸೋಲಿಸಲು‌ ಬಿಜೆಪಿ ಯಾವುದೇ ಪಕ್ಷದೊಂದಿಗೆ‌ ಹೊಂದಾಣಿಕೆ ಮಾಡಿಕೊಂಡಿಲ್ಲ, ಮೈಸೂರು‌ ಭಾಗದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಈಗಾಗಲೇ ಆಕ್ರೋಶ ಬುಗಿಲೆದ್ದಿದೆ, ರಾಜ್ಯದ ಮುಖ್ಯ ಮಂತ್ರಿಯಾಗಿ ಎಲ್ಲಾ ಸಮುದಾಯದವರನ್ನೂ ಒಟ್ಟಿಗೆ ಕೊಂಡೊಯ್ಯುವಲ್ಲಿ ಸಿದ್ದರಾಮಯ್ಯನವರು ಎಡವಿದ್ದಾರೆ, ಸಮಾಜವನ್ನು ಒಡೆಯುವ ಕೆಲಸ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ದೂರಿದರು.

ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದ ವರ್ಗಗಳ ‌ಬೆಂಬಲ‌ ಯಡಿಯೂರಪ್ಪನವರಿಗಿದೆ, ಯಡಿಯೂರಪ್ಪ ನವರು ಕೇವಲ‌ ವೀರಶೈವ‌ ಮತಗಳಿಂದ ಮಾತ್ರ ಗೆಲುವು ಸಾಧಿಸಲ್ಲ ಎಲ್ಲಾ ಸಮುದಾಯಗಳೂ ಅವರೊಟ್ಟಿಗಿವೆ, ಹಳೇ ‌ಮೈಸೂರು‌‌ ಹಾಗೂ‌‌ ಮೈಸೂರು‌ ಭಾಗದಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಜೊತೆಗೆ ಬೇರೆ ಬೇರೆ ವಿಷಯಗಳು‌ ಕೂಡಾ ಚರ್ಚೆಯಾಗುತ್ತಿದೆ. ನಾನು ಸ್ಪರ್ಧೆ ಮಾಡಬೇಕೆನ್ನುವುದು ವರುಣಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯವಾಗಿದೆ ಈ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ, ಸ್ಪರ್ಧೆಯ ಕುರಿತು ಈಗಲೇ ನಾನೇನೂ ಹೇಳುವುದಲ್ಲಿ ಎಂದರು.


ಸಂಬಂಧಿತ ಟ್ಯಾಗ್ಗಳು

B.Y.Raghavendra Siddaramaiah ಅಭಿವೃದ್ಧಿ ಮಾಧ್ಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ