ಬೆಂಗಳೂರಿನಲ್ಲಿ ಸೈನಿಕನ ಬರ್ಬರ ಹತ್ಯೆ

soldier

30-03-2018

ಬೆಂಗಳೂರು: ವಿವೇಕ್ ನಗರದಲ್ಲಿರುವ ಸೇನಾ ಕ್ಯಾಂಪ್ ನಲ್ಲಿ ಸೈನಿಕ ನೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಿಹಾರ ಮೂಲದ ಪಂಕಜ್ ಹತ್ಯೆಗೀಡಾಗಿರುವ ದುರ್ದೈವಿ. ಪಂಕಜ್ನನ್ನು ಆತನ ಸಹೋದ್ಯೋಗಿ ಸೈನಿಕರೇ ಹತ್ಯೆ ಮಾಡಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಫಟನೆ ಮಾರ್ಚ್ 23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಂಕಜ್  ಕಳೆದ ಆರು ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಂಕಜ್ ಹತ್ಯೆ ಆರೋಪದ ಮೇರೆಗೆ ಸೈನಿಕರಾದ ಮುರಳಿಕೃಷ್ಣ ಹಾಗೂ ಧನರಾಜ್ರನ್ನು ಬಂಧಿಸಲಾಗಿದೆ.

2017ರಲ್ಲಿ ಮುರಳಿಕೃಷ್ಣ ಪಂಕಜ್ ಅವರ ಸೇನಾ ಗುರುತಿನ ಚೀಟಿಯನ್ನು ಕದ್ದಿದ್ದ. ಆ ಸಂಬಂಧ ಪಂಕಜ್ ಮುರುಳಿಕೃಷ್ಣ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಸದ್ಯದಲ್ಲೇ ಆ ಸಂಬಂಧ ಸೇನಾ ಹಿರಿಯ ಅಧಿಕಾರಿಗಳು ಕ್ರಮ ಪ್ರಕಟಿಸಲಿದ್ದರು. ಈ ಹಿನ್ನೆಲೆಯಲ್ಲಿ ಮುರಳಿ ಕೃಷ್ಣ ತನ್ನ ಇನ್ನೊಬ್ಬ ಸೈನಿಕ ಗೆಳೆಯ ಧನರಾಜ್ ಜೊತೆ ಸೇರಿ ಪಂಕಜ್ ನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಂಕಜ್ ಮಲಗಿದ್ದಾಗ ಆರೋಪಿಗಳು ಚಾಕುವಿನಿಂದ ತಿವಿದು ನಂತರ ಕತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದರು. ನಂತರ ಹೊರಗೆ ತೆಗೆದುಕೊಂಡು ಹೋಗಿ ಶವವನ್ನು ಸುಟ್ಟುಹಾಕುವ ಯತ್ನ ನಡೆಸಿದ್ದರು. ಆರೋಪಿಗಳನ್ನು ಬಂಧಿಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Soldier murder ಬರ್ಬರ ಬಿಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Give good news please avoid fake news
  • Yogesh.M.H
  • Agriculture