ಡೆತ್ ನೋಟ್ ಬರೆದಿಟ್ಟು ತಾಯಿ-ಮಕ್ಕಳು ಆತ್ಮಹತ್ಯೆ

Death-note: mother and 2kids committed suicide

30-03-2018

ಮಂಡ್ಯ: ಡೆತ್ ನೋಟ್ ಬರೆದಿಟ್ಟು ತಾಯಿ-ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಳವಳ್ಳಿ ತಾಲ್ಲೂಕಿನ ಗುಳಗಟ್ಟ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುನೀತ (30), ಪ್ರಿಯಾಂಕ (16), ಪ್ರಜ್ವಲ್ (13) ಮೃತ ದುರ್ದೈವಿಗಳು. ನಮ್ಮ ಸಾವಿಗೆ ಮೋಹನ ಹಾಗೂ ಜಗ್ಗ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಸ್ಥಳಕ್ಕೆ ಮಳವಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

death note suicide ಇನ್ಸ್ಪೆಕ್ಟರ್ ಪರಿಶೀಲನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ