ಮಗಳ ಮೇಲೆ ಕಣ್ಣಾಕಿದವನ ಕೊಲೆ

illegal relationship: A woman murdered a man

29-03-2018

ಬೆಂಗಳೂರು: ಪೀಣ್ಯದ ಅನ್ನಪೂರ್ಣೇಶ್ವರಿನಗರದಲ್ಲಿ ನಿನ್ನೆ ಮಧ್ಯರಾತ್ರಿ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಬಡಗಿಯನ್ನು ಮಹಿಳೆಯೊಬ್ಬರು ನಿದ್ದೆಮಾತ್ರೆ ಹಾಕಿದ್ದ ರಾಗಿ ಮುದ್ದೆ ನುಂಗಿಸಿ ಗಾಢ ನಿದ್ದೆಗೆ ಜಾರಿದ ನಂತರ ಕೈಕಾಲು ಕಟ್ಟಿಹಾಕಿ ತುರಮಣೆಯಿಂದ ತಲೆ ಕುತ್ತಿಗೆ ಇನ್ನಿತರ ಭಾಗಗಳಿಗೆ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.

ದಾಸರಹಳ್ಳಿಯ ರಘು (32) ಕೊಲೆಯಾಗಿದ್ದು, ಕೃತ್ಯವೆಸಗಿದ್ದ ಅನ್ನಪೂರ್ಣೇಶ್ವರಿನಗರದ ರೂಪ(32)ಳನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ತನ್ನ ಅಪ್ರಾಪ್ತ ಮಗಳ ಮೇಲೆ ಕಣ್ಣಾಕಿ ಲೈಂಗಿಕ ತೃಷೆಗೆ ಬಳಸಿಕೊಳ್ಳಲು ಯತ್ನಿಸುತ್ತಿದ್ದ ಕಾರಣಕ್ಕೆ ರಘುನನ್ನು ರೂಪ ಕೊಲೆ ಮಾಡಿ ಜೈಲು ಸೇರಿದ್ದಾಳೆ.

ಎಲೆಗೆಂಟ್ ಕಂಪನಿಯಲ್ಲಿ ಬಡಗಿಯಾಗಿದ್ದ ರಘು ಜೊತೆ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ರೂಪ ಅನೈತಿಕ ಸಂಬಂಧ ಹೊಂದಿದ್ದರು, ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿದ್ದರೂ ಇವರಿಬ್ಬರ ಅನೈತಿಕ ಸಂಬಂಧ ಮುಂದುವರೆದಿತ್ತು. ಈಕೆಗೆ ಇಬ್ಬರು ಮಕ್ಕಳಿದ್ದರು. ಮಧುಮೇಹಕ್ಕೆ ತುತ್ತಾಗಿದ್ದ ರೂಪ ಎರಡು ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದರು.

ರೂಪ ಪತಿ ಪ್ರಭು ಕೆಲಸಕ್ಕೆ ಹೋದಾಗ ಮನೆಗೆ ಬಂದು ಹೋಗುತ್ತಿದ್ದ ರಘು ರೂಪಳ ಅಪ್ರಾಪ್ತ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಾ ಆಕೆಯನ್ನು ಕೂಡ ಲೈಂಗಿಕ ತೃಷೆಗೆ ಬಳಸಿಕೊಳ್ಳಲು ಮುಂದಾಗಿದ್ದ ಹಲವು ಬಾರಿ ಈ ವಿಷಯವಾಗಿ ರೂಪ ಬುದ್ಧಿ ಹೇಳಿ ಜಗಳ ಮಾಡಿದ್ದರೂ ಆತನ ವರ್ತನೆ ಬದಲಾಗಿರಲಿಲ್ಲ.

ರೂಪ ಪತಿ ಪ್ರಭು ನಿನ್ನೆ ಕೆಲಸದ ಮೇಲೆ ಊರಿಗೆ ಹೋಗಿದ್ದ ರಾತ್ರಿ ಮನೆಗೆ ಬಂದಿದ್ದ ರಘು ಮತ್ತೆ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲವಾಗಿ ಮಾತನಾಡಿಸಿ ಆಕೆಯು ನನಗೆ ಬೇಕು ಎಂದಿದ್ದಾನೆ. ಈ ವಿಷಯವಾಗಿ ಇಬ್ಬರ ನಡುವೆ ಜೋರಾದ ಗಲಾಟೆ ನಡೆದಿದೆ. ಮಗಳ ಮೇಲೆ ಕಣ್ಣಾಕಿರುವ ರಘುವಿಗೆ ಒಂದು ಗತಿ ಕಾಣಿಸಬೇಕೆಂದು ನಿರ್ಧರಿಸಿದ ಮೊದಲೇ ತಂದಿರಿಸಿದ್ದ ನಿದ್ದೆ ಮಾತ್ರೆಯನ್ನು ರಾಗಿ ಮುದ್ದೆಯಲ್ಲಿ ಬೆರಸಿ ಒಳ್ಳೆಯ ಮಾತುಗಳನ್ನಾಡಿ ಊಟಕ್ಕೆ ಬಡಿಸಿದ್ದಾಳೆ .

ಊಟದ ನಂತರ ನಿದ್ದೆಗೆ ಜಾರಿದ ರಘುವಿನ ಕೈಕಾಲು ಕಟ್ಟಿಹಾಕಿ ತುರಮಣೆಯಿಂದ ತಲೆ ಕುತ್ತಿಗೆ ಇನ್ನಿತರ ಭಾಗಗಳಿಗೆ ಮನಸೋ ಇಚ್ಚೆ ಹೊಡೆದಿದ್ದಾಳೆ ಮಧ್ಯರಾತ್ರಿ 1.45ರ ವೇಳೆ ರೂಪ ಅವರ ಮನೆಯಿಂದ ಜೋರಾಗಿ ಶಬ್ದ ಬರುವುದನ್ನು ಕೇಳಿಸಿಕೊಂಡ ಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೀಣ್ಯ ಪೊಲೀಸರು ಧಾವಿಸುವಷ್ಟರಲ್ಲಿ ರಘು ಕೊಲೆಯಾಗಿದ್ದರು, ತಾಯಿ ರಘುಗೆ ಹೊಡೆದು ಕೊಲೆ ಮಾಡಿರುವುದು ಮನೆಯ ಮತ್ತೊಂದು ಕೊಠಡಿಯಲ್ಲಿದ್ದ ರೂಪ ಅವರ ಇಬ್ಬರು ಮಕ್ಕಳು ನಿದ್ದೆಯಲ್ಲಿದ್ದರಿಂದ ಅವರಿಗೇನೂ ಗೊತ್ತಾಗಿರಲಿಲ್ಲ ಕೊಲೆ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mureder relationship ಕೊಠಡಿ ಡಿಸಿಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ