ಹೆಲ್ಮೆಟ್ ಹಂಚಿ ನೀತಿ ಸಂಹಿತೆ ಉಲ್ಲಂಘನೆ

Code of Conduct violation by Arvind Limbavali

29-03-2018

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಬೆಂಬಲಿಗರು ಮಹದೇವಪುರದಲ್ಲಿ  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಯಡಿಯೂರಪ್ಪ ಅವರ ಭಾವಚಿತ್ರ ಇರುವ ಹೆಲ್ಮೆಟ್ ಗಳನ್ನು ಹಂಚುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಘಟನೆ ವರದಿ ಯಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ರೂ ಸಾಫ್ಟ್‌ ವೇರ್ ಎಂಜಿನಿಯರ್ ಮತದರಾರರಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಉಚಿತವಾಗಿ ಹೆಲ್ಮೆಟ್ ಹಂಚಿಕೆ ಮಾಡಿ ಆಮಿಷವೊಡ್ಡಿದ್ದಾರೆ.

ವೈಟ್ ಫೀಲ್ಡ್, ಮಹದೇವಪುರ ಸುತ್ತಮುತ್ತ ಹೆಲ್ಮೆಟ್ ಹಂಚಿಕೆ ಮಾಡಲಾಗಿದೆ. ಹೆಲ್ಮೆಟ್ ಮೇಲೆ ಮೋದಿ, ಅಮಿತ್ ಷಾ, ಯಡಿಯೂರಪ್ಪ, ಶಾಸಕ ಅರವಿಂದ ಲಿಂಬಾವಳಿ ಭಾವಚಿತ್ರಗಳು ಇವೆ. ಹೆಲ್ಮೆಟ್ಗೆ ನವ ಭಾರತಕ್ಕಾಗಿ, ನವ ಕರ್ನಾಟಕಕ್ಕಾಗಿ ಮಹದೇವಪುರ ಎಂಬ ಸ್ಟಿಕರ್ ಅಳವಡಿಸಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Arvind Limbavali Helmet ವಿಧಾನಸಭಾ ನೀತಿ ಸಂಹಿತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ