ಅಪಘಾತ ಸ್ಥಳದಲ್ಲೇ ಒಂದೇ ಕುಟುಂಬದ ಐವರ ಸಾವು

Kannada News

13-05-2017

ಬೀದರ್ : ರಾಷ್ಟ್ರೀಯ ಹೆದ್ದಾರಿ ೦೯ರ  ಬಸವಕಲ್ಯಾಣದ ಸಪ್ತಾಪೂರ ಬಂಗ್ಲಾಬಳಿ ಝೈಲೋ ಕಾರು-ಲಾರಿ ಡಿಕ್ಕಿ, ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ  ಐವರು ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಗಾಯವಾಗಿದೆ. ಮಯೂರ ಚವಲಾ ೩೧,  ಭಾರತಿ ಚವಲಾ,೫೭, ಜೀನಲ್ ಚವಲಾ೨೮, ಖಯಾಮ್ ಚವಲಾ೨೫  , ಸುನೀಲ್ ಮೃತಪಟ್ಟಿದ್ದಾರೆ. ತ್ರೀಶಾ ಎಂಬ ಬಾಲಕಿಗೆ  ಗಂಭೀರ ಗಾಯವಾಗಿದು ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿದ್ದರು ಅದರಲ್ಲಿ ಐವರು ಮೃತಪಟ್ಟಿದು ಒಬ್ಬ ಬಾಲಕಿಗೆ ಗಂಭೀರ ಗಾಯವಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು  ಮಹಾರಾಷ್ಟ್ರದ ಮುಂಬಯಿ  ಮೂಲದವರು ಎಂದು ತಿಳಿದು ಬಂದಿದೆ.ಮುಂಬಯಿ ಯಿಂದ ಹೈದ್ರಾಬಾದ್ ಹೋಗುತ್ತಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಒಂದು ಮಗು ಮೃತ ಪಟ್ಟಿದೆ..‌  ಸ್ಥಳಕ್ಕೆ ಎಸ್ಪಿ ಪ್ರಕಾಶ ನಿಕಮ್ .ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಭೇಟಿ ಪರಶೀಲನೆ ನಡೆಸಿದರು.

Links :ಸಂಬಂಧಿತ ಟ್ಯಾಗ್ಗಳು

ಅಪಘಾತ ಅಪಘಾತ ಅಪಘಾತ ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ