ನೀತಿ ಸಂಹಿತೆ ಜಾರಿ: ಚುನಾವಣಾ ಆಯೋಗದ ಎಚ್ಚರಿಕೆ

Code of Conduct Enacted: Warning of Election Commission

27-03-2018

ಬೆಂಗಳೂರು: ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಚಿವರು, ಜನಪ್ರತಿನಿಧಿಗಳು ಯಾವುದೇ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಬಾರದು. ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆಯುವುದಾಗಲೀ, ಹೊಸ ಕಾರ್ಯಕ್ರಮಗಳನ್ನು ಘೋಷಿಸುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ವಿಶೇಷವಾಗಿ ಆಡಳಿತ ಪಕ್ಷಕ್ಕೆ ವಿಶೇಷ ಎಚ್ಚರಿಕೆ ನೀಡಿದ್ದು, ಕುಡಿಯುವ ನೀರು, ಪ್ರಕೃತಿ ವಿಕೋಪ ಮತ್ತು ತೀವ್ರ ಅನಾರೋಗ್ಯಕ್ಕೀಡಾಗಿರುವವರಿಗೆ ನೆರವು ನೀಡಬಹುದು. ಹೊಸ ಪಡಿತರ ಚೀಟಿ ವಿತರಣೆ, ಹೊಸದಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಬಜೆಟ್‍ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳ ಜಾರಿಗೆ ಅಧಿಸೂಚನೆ ಹೊರಡಿಸಿರುವ ಕಾರ್ಯಕ್ರಮಗಳ ಜಾರಿಗೆ ಯಾವುದೇ ರೀತಿಯಲ್ಲೂ ತೊಂದರೆಯಿಲ್ಲ. ಮುಖ್ಯಮಂತ್ರಿ ಅವರಾಗಲೀ, ಸಚಿವಾರಲೀ ತಮ್ಮ ವಿವೇಚನೆ ಬಳಸಿ ಹಣ ಬಿಡುಗಡೆ ಮಾಡಲು ಅವಕಾಶವಿಲ್ಲ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಹೊಸದಾಗಿ ಹಣ ಬಿಡುಗಡೆ ಮಾಡುವಂತಿಲ್ಲ. ಹಾಗೊಂದು ವೇಳೆ ಈಗಾಗಲೇ ಬಿಡುಗಡೆ ಮಾಡಿರುವ ಹಣದಲ್ಲಿ ಸಮುದಾಯ ಭವನ, ರಸ್ತೆ, ಸೇತುವೆ ನಿರ್ಮಾಣವಾಗಿದ್ದರೆ ಉದ್ಘಾಟನೆಗೆ ಸಚಿವರು, ಜನಪ್ರತಿನಿಧಿಗಳನ್ನು ಕರೆಸಬಾರದು. ಅಧಿಕಾರಿಗಳ ಮೂಲಕ ಉದ್ಘಾಟನೆ ಮಾಡಿ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಯನ್ನು ಆಯೋಗದ ಅನುಮತಿ ಇಲ್ಲದೇ ವರ್ಗಾವಣೆ ಮಾಡುವಂತಿಲ್ಲ. ಸರ್ಕಾರಿ ಯಂತ್ರದ ದುರ್ಬಳಕೆ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು. ಅಧಿಕೃತ ಕೆಲಸಗಳಿಗೆ ಮಾತ್ರ ಸರ್ಕಾರಿ ವಾಹನಗಳನ್ನು ಬಳಕೆ ಮಾಡಬೇಕು. ಮನೆಯಿಂದ ಕಚೇರಿ ಇಲ್ಲವೆ ಅಧಿಕೃತ ಕೆಲಸ ಕಾರ್ಯ ಇರುವ ಕಡೆಗಳಿಗೆ ಮಾತ್ರ ಸರ್ಕಾರಿ ವಾಹನಗಳನ್ನು ರಾಜ್ಯದ ಒಳಗಡೆ ಮತ್ತು ಹೊರಗಡೆ ಪ್ರವಾಸ ಮಾಡುವ ಸಂದರ್ಭದಲ್ಲಿ ವಾಹನ ಬಳಸಲು ಮುಖ್ಯ ಕಾರ್ಯದರ್ಶಿ ಅವರ ಅನುಮತಿ ಪಡೆಯಬೇಕು. ಚುನಾವಣಾ ಉದ್ದೇಶಕ್ಕಾಗಿ ಕೂಡಲೇ ಸರ್ಕಾರಿ ವಾಹನಗಳನ್ನು ವಶಪಡಿಸಿಕೊಳ್ಳುವಂತೆಯೂ ಸಂಬಂಧಪಟ್ಟವರಿಗೆ ಆಯೋಗ ನಿರ್ದೇಶನ ನೀಡಿದೆ.


ಸಂಬಂಧಿತ ಟ್ಯಾಗ್ಗಳು

election commision ration card ಅಧಿಕೃತ ಉದ್ದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ