ಆತಂಕ ಸೃಷ್ಟಿಸಿದ ಅನಾಮಧೇಯ ಪತ್ರ

Threatening letter to male mahadeshwara betta

27-03-2018

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಬಾಂಬ್ ಹಾಕುವುದಾಗಿ ಬಂದಿರುವ ಅನಾಮಧೆಯ ಪತ್ರವೊಂದು ಆತಂಕ ಸೃಷ್ಟಿಸಿದೆ. ಮಲೆ ಮಹದೇಶ್ವರ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರಕ್ಕೆ ಬಂದ ಬೆದರಿಕೆ ಪತ್ರದಲ್ಲಿ ಬಾಂಕ್ ಹಾಕುವುದಾಗಿ ಉಲ್ಲೇಖಿಸಲಾಗಿದೆ. ಈ ಕುರಿತು ಕೂಡಲೆ ದೇವಸ್ಥಾನ ಮಂಡಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ಅನಾಮಧೇಯ ಪತ್ರ ಬಂದಿರುವ ಬಗ್ಗೆ ದೇವಸ್ಥಾನ ಮಂಡಳಿಯ ಕಾರ್ಯದರ್ಶಿ ಎ.ಜೆ.ರೂಪ ಸ್ಪಷ್ಟಪಡಿಸಿದ್ದಾರೆ. ಅದರಂತೆ ಕ್ಷೇತ್ರಕ್ಕೆ ಸೂಕ್ತ ಭದ್ರತೆಗಾಗಿ ಪೊಲೀಸರಿಗೆ ಎ.ಜೆ.ರೂಪ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದು ಒಂದು ಹುಸಿ ಬೆದರಿಕೆ ಪತ್ರ ಎಂದು ಹೇಳಲಾಗುತ್ತಿದೆ.

 


ಸಂಬಂಧಿತ ಟ್ಯಾಗ್ಗಳು

male mahadeshwara Threatening ಭದ್ರತೆ ಬಾಂಬ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ