ಎರಡು ಐಷಾರಾಮಿ ಕಾರುಗಳ ಜಪ್ತಿ

Two luxury cars seized by traffic police

27-03-2018

ಬೆಂಗಳೂರು: ತೆರಿಗೆ ಪಾವತಿಸದೆ ನಗರದಲ್ಲಿ ಸಂಚರಿಸುತ್ತಿದ್ದ ಎರಡು ಐಷಾರಾಮಿ ಕಾರುಗಳನ್ನು ಯಶವಂತಪುರ ಸಾರಿಗೆ ಕಛೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿ ಪೋಲಿಸ್ ವಶಕ್ಕೆ ನೀಡಿದ್ದಾರೆ.

ಪುದುಚೇರಿಯಲ್ಲಿ ವಾಹನ ನೋಂದಣಿ ಮಾಡಿಕೊಂಡು ಕಳೆದ 8ವರ್ಷಗಳಿಂದ ಯಾವುದೆ ತೆರಿಗೆ ಪಾವತಿಸದೆ ಬೆಂಗಳೂರಿನಲ್ಲಿ ಓಡಾಡುತ್ತಿದ್ದ ಮರ್ಸಿಡೀಸ್ ಬೆನ್ಜ್ ಕಾರನ್ನು ಜಪ್ತಿ ಮಾಡಲಾಗಿದೆ. ಪಿವೈ 01 ಬಿಹೆಚ್ 8222 ನೊಂದಣಿ ಸಂಖ್ಯೆಯ ವಾಹನ ಸದಾಶಿವನಗರದಲ್ಲಿ ಸಂಚರಿಸುತ್ತಿರುವಾಗ ಹಿರಿಯ ಮೋಟರು ವಾಹನ ತನಿಖಾಧಿಕಾರಿ ರಾಜಣ್ಣ ಅವರು ಜಪ್ತಿ ಮಾಡಿದ್ದಾರೆ.

ಸಂಚಾರ ಪೊಲೀಸರು ದಾಖಲಿಸಿರುವ ಪ್ರಕರಣಗಳು, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ತ ಹೀಗೆ ಹಲವು ದಾಖಲೆಗಳನ್ನು ಒಗ್ಗೂಡಿಸಿ ಪರಿಶೀಲಿಸಿದಾದ ಕಳೆದ 8ವರ್ಷದಿಂದ ವಾಹನ ಕರ್ನಾಟಕದಲ್ಲೇ ಇರುವದು ಖಚಿತವಾಗಿದೆ, ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ವಾಹನವನ್ನು ಜಪ್ತಿ ಮಾಡಿದ್ದು 18 ಲಕ್ಷ ರೂಪಾಯಿ ತೆರಿಗೆ ಪಾವತಿಸುವಂತೆ ನೋಟೀಸ್ ನೀಡಲಾಗಿದೆ.

ಕಳೆದ ಜುಲೈ 2015ರಿಂದ ಇದುವರೆಗೂ ತೆರಿಗೆ ಪಾವತಿಸದೇ ಇರುವ ಮರ್ಸಿಡೀಸ್ ಬೆನ್ಜ್ ಕಾರು ಸಂಖ್ಯೆ ಕೆ ಎ 05 ಟಿ ಎಫ್ 4555 ಮೇಲೆ ಯಶವಂತಪುರ ಸಾರಿಗೆ ಕಛೇರಿಯ ಅಧಿಕಾರಿಗಳು ಚಲನವಲನಗಳನ್ನು ಗಮನಿಸುತ್ತಿದ್ದರು. ಸರಿಯಾದ ಮಾಹಿತಿ ದೊರಕಿದ ಕಾರಣ ದಾಳಿ ನಡೆಸಿ ಕಾರನ್ನು ಜಪ್ತಿ ಮಾಡಲಾಗಿದೆ. 20 ಲಕ್ಷ ರೂಪಾಯಿಗಳ ತೆರಿಗೆಯನ್ನು ಪಾವತಿಸದೇ ಸಂಚರಿಸುತ್ತಿರುವ ಐಷಾರಾಮಿ ಕಾರುಗಳ ಚಲನವಲನಗಳ ಮೇಲೆ ಸಾರಿಗೆ ಇಲಾಖೆ ಗಮನ ಇಟ್ಟಿದ್ದು, ತೆರಿಗೆ ವಂಚಿಸುತ್ತಿರುವ ಜನರ ಮೇಲೆ ದಾಳಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ