ನೀತಿ ಸಂಹಿತೆ ಜಾರಿ: ಎಲ್ಲೆಡೆ ಹದ್ದಿನ ಕಣ್ಣು27-03-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ, ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಚುನಾವಣೆಯ ನೀತಿ ಸಂಹಿತೆ ಮತ್ತು ಇತರೆ ಪ್ರಮುಖ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಈಗಿನಿಂದಲೇ ಜಾರಿಯಾಗಿರುವ ನೀತಿ ಸಂಹಿತೆಯನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆದೇಶಿಸಲಾಗಿದೆ, ರಾಜ್ಯ ಸರ್ಕಾಕ್ಕೂ ತಿಳಿಸಲಾಗಿದೆ, ಮತ್ತು ಮುಖ್ಯಕಾರ್ಯದರ್ಶಿಗೂ ಮಾಹಿತಿ ರವಾನಿಸಲಾಗಿದೆ ಎಂದರು. ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಧಿಕಾರಗಳ ವರ್ಗಾವಣೆ ಮೇಲೆ ನಿಗಾ ವಹಿಸಲಾಗುವುದು, ಸಿಬ್ಬಂದಿ ಎಲ್ಲರೂ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು, ಪೋಲಿಂಗ್ ಸ್ಟೇಷನ್ ಇರುವ ಬಗ್ಗೆ ಆ್ಯಪ್ ಗಳನ್ನು ಬಿಡುಗಡೆ ಮಾಡಲಾಗಿದೆ, ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಮಾಧ್ಯಮಗಳ ಮುಖಾಂತರ ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ನೀತಿ ಸಂಹಿತೆ ಎಲ್ಲ ರಾಜಕೀಯ ಪಕ್ಷಗಳಿಗೆ ಅನ್ವಯಿಸುತ್ತದೆ, ಮತ್ತು ಸರ್ಕಾರಕ್ಕೂ ಬರುತ್ತೆ, ಅದೇ ರೀತಿ ಮಾಧ್ಯಮಗಳಿಗೂ ಅನ್ವಯವಾಗಲಿದೆ, ಮಾಧ್ಯಮಗಳಿಗೆ ಪೇಯ್ಡ್ ನ್ಯೂಸ್ ವಿಚಾರದ ಕುರಿತು, ಸುದ್ದಿ ಮತ್ತು ಜಾಹೀರಾತಿಗೆ ವ್ಯತ್ಯಾಸ ಇದೆ. ಸುದ್ದಿಗಳಲ್ಲಿ ಜಾಹೀರಾತು ಕಂಡುಬರುತ್ತಿದ್ದು, ಇದು ಗ್ರೇ ಏರಿಯಾ ಹಾಗಾಗಿ ನಾವು ಅದರ ಬಗ್ಗೆಯೂ ನಿಗಾ ವಹಿಸುತ್ತೇವೆ ಎಂದರು.

ಈಗ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸರ್ಕಾರದಿಂದ ಯಾವುದೇ ಹೊಸ ಘೋಷಣೆ ಮಾಡಲು ಸಾಧ್ಯವಿಲ್ಲ, ಘೋಷಣೆ ಮಾಡಿರುವ ಯೋಜನೆಗಳಿಗೆ ಚಾಲನೆ ಕೊಡುವ ಹಾಗಿಲ್ಲ‌, ಶಂಕುಸ್ಥಾಪನೆ ಮಾಡುವಂತಿಲ್ಲ. ಹೊಸ ಫಲಾನುಭವಿಗಳ ಆಯ್ಕೆ ಮಾಡುವಹಾಗಿಲ್ಲ, ವರ್ಕ್ ಆರ್ಡರ್ ಕೊಟ್ಟಿದ್ದರೂ ಕಾಮಗಾರಿ ಪ್ರಾರಂಭ ಮಾಡುವ ಹಾಗಿಲ್ಲ ಎಂದು ತಿಳಿಸಿದರು.

ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಹೊಸ ಘೋಷಣೆ ಮಾಡಲು ಅವಕಾಶ ಇಲ್ಲ, ಸಚಿವರು ಅಧಿಕಾರಗಳ ಮೀಟಿಂಗ್ ಕರೆಯುವುದಕ್ಕೆ ಅವಕಾಶ ಇಲ್ಲ‌, ಇದು ಶಾಸಕರಿಗೂ ಅನ್ವಯಿಸುತ್ತೆ, ಏನೇ ಆದರೂ ಅಧಿಕಾರಿಗಳ ಮಟ್ಟದಲ್ಲಿ ಆಗಬೇಕು, ಸರ್ಕಾರದ ವಾಹನಗಳನ್ನು ಕಚೇರಿ ಮತ್ತು ಅವರ ಅಧಿಕೃತ ಮನೆವರೆಗೂ ಮಾತ್ರ ಬಳಸಬಹುದು ಅಷ್ಟೇ.

ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳಲು ಅನುಮತಿ ಪಡೆಯಬೇಕು, ಅಕಸ್ಮಾತ್ ಹೋದರೂ ಚುನಾವಣಾ ಕಾರ್ಯದಲ್ಲಿರುವ ಅಧಿಕಾರಿಗಳ ಜೊತೆ ಸಭೆ ನಡೆಸುವಂತಿಲ್ಲ. ಇನ್ನೂ ಅಧಿಕಾರಿಗಳು ಸಹ ಸಚಿವರನ್ನ ಭೇಟಿ ಮಾಡುವಂತಿಲ್ಲ, ಸರ್ಕಾರ ಹೊಸ ಜಾಹೀರಾತು ನೀಡುವಂತಿಲ್ಲ, ಕೊಟ್ಟಿರುವ ಜಾಹೀರಾತುಗಳನ್ನು ವಾಪಾಸ್ ಪಡೆಯಬೇಕು ಎಂದಿದ್ದಾರೆ.

ಭಾಷಣ ಸಮಯದಲ್ಲಿ ವ್ಯಯಕ್ತಿಕ ನಿಂದನೆಗೆ ಅವಾಕಾಶ‌ ಇಲ್ಲ, ಜಾತಿ, ಧರ್ಮಗಳ ಪ್ರಚೋದನಕಾರಿ ಹೇಳಿಕೆ ನೀಡುವಂತಿಲ್ಲ, ಸಮಾವೇಶ, ರೋಡ್ ಶೋ ಗಳು ಜನರಿಗೆ ತೊಂದರೆ ಆಗದ ರೀತಿಯಲ್ಲಿ ಮಾಡಬೇಕು, ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೂ ಲೌಡ್ ಸ್ಪೀಕರ್ ಹಾಕುವಂತಿಲ್ಲ. ಪೋಲಿಂಗ್ ಸ್ಟೇಷನ್ ಗಳಲ್ಲಿ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ, ದೇವಾಲಯ, ಚರ್ಚ್, ಮಸೀದಿಗಳಲ್ಲಿ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sanjiv Kumar Chief Electoral Off ಜಾಹೀರಾತು ಕಾಮಗಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ