‘ನುಡಿದಂತೆ ನಡೆದಿದ್ದೇವೆ, ಚುನಾವಣೆಗೆ ಸಿದ್ಧ’-ಡಿಕೆಶಿ27-03-2018

ಶಿವಮೊಗ್ಗ: ನಾವು ನುಡಿದಂತೆ ನಡೆದಿದ್ದೇವೆ, ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ ಎಂದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮುಂದಿನ ತಿಂಗಳು ಏಪ್ರಿಲ್ 3 ಅಥವಾ 4ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಬರುವ ಸಾಧ್ಯತೆ ಇದೆ, ಆದ್ದರಿಂದ ಸ್ಥಳ ಪರಿಶೀಲನೆಗೆ ಬಂದಿದ್ದೇನೆ ಎಂದು ತಿಳಿಸಿದರು. ಇಡೀ ಕಾಂಗ್ರೆಸ್ ನಲ್ಲಿ ಒಮ್ಮತದ ಮೂಲಕ ರಾಹುಲ್ ಗಾಂಧಿ ಅವರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ, ಶೀಘ್ರದಲ್ಲೇ ಕಾಂಗ್ರೆಸ್ ಟಿಕೆಟ್ ಫೈನಲ್ ಮಾಡಲಿದ್ದಾರೆ. ಗೊಂದಲ ಬೇಡ ಎಂದು ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ. 

ಇದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಷಾ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಬಿಜೆಪಿಯವರದ್ದು ಕೆಟ್ಟು ಹೋದ ಟ್ರಾನ್ಸಫಾರ್ಮರ್ ನಮ್ಮ ಟ್ರಾನ್ಸ್ ಫಾರ್ಮರ್ ಚೆನ್ನಾಗಿದೆ. ಅವರು ಬ್ಯಾಟರಿ ಇನ್ನೂಂದು ಹಾಕಿಕೊಂಡು ತಯಾರಾಗಲಿ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

D.K.Shivakumar election ಟ್ರಾನ್ಸಫಾರ್ಮರ್ ಫೈನಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ