ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ: ಹೆಚ್ಡಿಡಿ ಪುನರುಚ್ಛಾರ

There is no alliance with any party: H.D.devegowda

27-03-2018

ಬೆಂಗಳೂರು: ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಈಗಾಗಲೇ ಚುನಾವಣೆ‌ ದಿನಾಂಕ ಘೋಷಣೆಯಾಗಿದೆ. ಚುನಾವಣೆಯಲ್ಲಿ ಜೆಡಿಎಸ್, ಬಿಎಸ್ಪಿ‌ ಸೀಟು ಹಂಚಿಕೆ ಮಾಡಿಕೊಳ್ಳೋ ಮೂಲಕ ನಮ್ಮ ಶಕ್ತಿ‌ ಪ್ರದರ್ಶನ ಮಾಡಿದ್ದೇವೆ ಎಂದರು. ಸಿ-ಫೋರ್ ಸಮೀಕ್ಷೆ ನಮಗೆ 27ಸ್ಥಾನ ನೀಡಿದೆ, ಮೇ.15ಕ್ಕೆ ಚುನಾವಣಾ ಫಲಿತಾಂಶ ಬರಲಿದ್ದು, ಮೇ18 2018ರಂದು ನಾನು ವಿಜೃಂಭಣೆಯಿಂದ ರಾಜ್ಯದ ಜನತೆ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ‌ ಎಂದು ಪರೋಕ್ಷವಾಗಿ ನಾವೇ ಗೆಲ್ಲಲಿದ್ದೇವೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

ಪ್ರಗತಿಪರ ಸಂಘಟನೆಯವರು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿ ಎಂದಿದ್ದರು, ಆದರೆ ಪ್ರಗತಿಪರರು ಹೇಳಿದ್ದನ್ನು ಮಾಡುವುದಕ್ಕೆ ಸಮಯವಿಲ್ಲ, ಆದರೂ ಬಿಜೆಪಿಗೆ ನಷ್ಟವಾಗುವಂತೆ ನೋಡಿಕೊಳ್ಳಬೇಕು ಎಂದಿದ್ದರು ಪ್ರಗತಿಪರರು. ಆದರೆ ನಾನು ಈ ವಿಚಾರವಾಗಿ ಹೇಳಿದ್ದನ್ನು ಬೇರೆ ರೀತಿ ವಿಶ್ಲೇಷಿಸಲಾಗುತ್ತಿದೆ ಮಾಧ್ಯಮಗಳಲ್ಲಿ ಈ ವಿಚಾರ ನೋಡಿ ಬೇಸರವಾಗಿದೆ ಎಂದು ಹೇಳಿದರು.

ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ದೇವೇಗೌಡರು ಪುನರುಚ್ಛರಿಸಿದ್ದಾರೆ. ಕಳೆದ ಮೂರು ದಿನಳಿಂದ ಸ್ವೇಚ್ಛಾಚಾರವಾಗಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ, ಸಾಧ್ಯವಾದ ಮಟ್ಟಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ಬೇಕಾದ ಕಡೆ ವರ್ಗಾವಣೆ ಮಾಡಿದ್ದಾರೆ, ಇದನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. ಈಗಾಗಲೇ ನಾವು ಬಿಎಸ್ಪಿ ಜೊತೆ ಕೈ ಜೋಡಿಸಿದ್ದೇವೆ. ಎಸ್ಪಿ ಬಂದರೆ ಪರಿಶೀಲನೆ ನಡೆಸುತ್ತೇನೆ, ಉಳಿದ ಪಕ್ಷಗಳ ಮೈತ್ರಿಯನ್ನು ಪರಿಗಣಿಸಲು ಸಮಯ ಇಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

H.D.Deve Gowda election ಸುದ್ದಿಗೋಷ್ಠಿ ಸಂಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ