ಬಿಬಿಎಂಪಿ ಅಧಿಕಾರಿಗಳಿಂದ ದೇವಸ್ಥಾನ ಹಾಗೂ ಚರ್ಚ್ ದ್ವಂಸ

Kannada News

13-05-2017

ಬೆಂಗಳೂರು:ರಾತ್ರೋ ರಾತ್ರಿ ಬಿಬಿಎಂಪಿ ಅದಿಕಾರಿಗಳು ಜೆಸಿಬಿ ತಂದು ದೇವಸ್ಥಾನ ಹಾಗು ಚರ್ಚ್ ಅನ್ನ ಕೆಡವಿ ದ್ವಂಸಗೊಳಿಸಿರುವಂಥ ಘಟನೆ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ... ಕಳೆದ ಮೂವತ್ತು ವರ್ಷಗಳಿಂದ ಇದ್ದ ಅಮ್ಮ ಶಕ್ತಿ ದೇವಸ್ಥಾನ ಹಾಗು ಹಿಂಬದಿಯಲ್ಲಿದ್ದ ಚರ್ಚ್ ಅನ್ನ ಜೆಸಿಬಿ ಗಳ ಮೂಲಕ ಒಡೆದು ಹಾಕಲಾಗಿದೆ.. ರಾತ್ರಿ ಈ ಏರಿಯಾದಲ್ಲಿ ಎಲ್ಲರು ಮಲಗಿರುವಂಥ ಸಮಯ ನೊಡಿಕೊಂಡು ಬಿಬಿಎಂಪಿ ಅದಿಕಾರಿಗಳು ಪೊಲೀಸರ ಸರ್ಪಗಾವಲಿನಲ್ಲಿ ಐದಕ್ಕೂ ಹೆಚ್ಚು ಜೆಸಿಬಿ ಗಳನ್ನ ತಂದು ದ್ವಂಸಗೊಳಿಸಿದ್ದಾರೆ. ಜೆಸಿಬಿ ಶಬ್ಧ ಕೆಳಿಸುತ್ತಿದ್ದಂತೆ ಸ್ಥಳೀಯರೆಲ್ಲರು ಮನೆಯಿಂದ ಹೊರಗಡೆ ಬಂದು ಗಲಾಟೆ ಮಾಡಲು ಮುಂದಾದಾಗ ಪೊಲೀಸರು ಅವರನ್ನ ತಡೆದು ಕಾರ್ಯಚರಣೆಗೆ ನೆರವು ಮಾಡಿಕೊಟ್ಟಿದ್ದಾರೆ. ಇನ್ನು1976 ರಲ್ಲಿ ಡಾ ನಾಗರಾಜು ಎಂಬುವವರಿಗೆ ಸೇರಿದ 19ಸಾವಿರ ಚದರ ವಿಸ್ತೀರ್ಣದ ಸುಮಾರು ಮೂವತ್ತು ಕೋಟಿ ಬೆಲೆ ಬಾಳುವ ಈ ಜಾಗವನ್ನು ಆಸ್ಪತ್ರೆ ಕಟ್ಟುವ ಸಲುವಾಗಿ ಬಿಟ್ಟುಕೊಡಲಾಗಿತ್ತಂತೆ...ಅದಾದ ಬಳಿಕ ಇಲ್ಲಿನ ಸ್ಥಳೀಯರು ಇಲ್ಲಿ ದೇವಸ್ಥಾನ ನಿರ್ಮಿಸಿ ಆಸ್ಪತ್ರೆ ಕಟ್ಟುವುದಕ್ಕೆ ಅಡ್ಡಿ ಮಾಡುತ್ತಿದ್ದರೆಂದು ಬಿಬಿಎಂಪಿ ಸ್ವತಃ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿತ್ತು. ತಕ್ಷಣ ಜಾಗವನ್ನ ಖಾಲಿ ಮಾಡುವಂತೆ ಈ ಹಿಂದೆ ಬಿಬಿಎಂಪಿ ನೋಟಿಸ್ ಅನ್ನು ಸಹ ಜಾರಿ ಮಾಡಿದ್ದರಂತೆ. ನಂತರ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೆ ತಡರಾತ್ರಿ ಬಂದು ದೇವಸ್ಥಾನ ಮತ್ತು ಚರ್ಚ್ ನ್ನು  ಕೆಡವಿದ್ದಾರೆ.  ನಂತರ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ಸಹ ಮಾಡಿದ್ದಾರೆ.ಇನ್ನು ಈ ಬಗ್ಗೆ ಮಾಹಿತಿ ಬಂದ ನಂತರ ಸ್ಥಳಕ್ಕೆ ತೆರಳಿದ ಮಾಧ್ಯಮದವರನ್ನು ಸಹ ಒಳ ಬಿಡದೆ ಮುಖ್ಯ ರಸ್ತೆಯಲ್ಲಿಯೇ ತಡೆಹಿಡಿಯಲಾಗಿತ್ತು. 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ