ಮಂಪರು ಪರೀಕ್ಷೆಗೆ ಭಾಷೆ ತೊಡಕು!

14days judicial custody for Hotte manja

26-03-2018

ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಮತ್ತೆ 14 ದಿನಗಳ ಕಾಲ ಮುಂದುವರಿಸಿ ಆದೇಶ ನೀಡಿದೆ. ಹೊಟ್ಟೆ ಮಂಜನ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಮೂರನೇ ಎಸಿಎಂಎಂ ಕೋರ್ಟ್ ಆರೋಪಿಗೆ ಮತ್ತೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ.

ಮಂಪರು ಪರೀಕ್ಷೆಗೆ ಭಾಷೆ ತೊಡಕು: ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ ನಡೆಸಲು ಎಸ್‍ಐಟಿ ಅಧಿಕಾರಿಗಳಿಗೆ ಈಗ ಭಾಷೆಯದ್ದೇ ದಿಟ್ಟ ತೊಡಕಾಗಿದೆ. ಅಹಮದಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈಗಾಗಲೇ ಮಂಪರು ಪರೀಕ್ಷೆಗೆ ದಿನ ನಿಗದಿ ಮಾಡುವಂತೆ ಕೋರಿ ಎಸ್‍ಐಟಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಆದರೆ ಅಲ್ಲಿ ಮಂಪರು ಪರೀಕ್ಷೆ ನಡೆಸಲು ಕನ್ನಡ ಬರುವ ವೈದ್ಯರಾಗಲೀ, ಮನಶಾಸ್ತ್ರಜ್ಞರಾಗಲೀ ಇಲ್ಲ. ಆರೋಪಿಯಿಂದ ಕನ್ನಡದಲ್ಲಿಯೇ ಉತ್ತರ ಪಡೆಯಬೇಕಿರುವುದರಿಂದ ಎಸ್‍ಐಟಿ ಅಧಿಕಾರಿಗಳು ಗುಜರಾತಿ ಮತ್ತು ಕನ್ನಡ ಎರಡೂ ಗೊತ್ತಿರುವ ವೈದ್ಯ ಮತ್ತು ಮನಶಾಸ್ತ್ರಜ್ಞರಿಗಾಗಿ ಹುಡುಕಾಡುತ್ತಿದ್ದಾರೆ. ಭಾಷೆ ಗೊತ್ತಿರುವ ಪರಿಣಿತರು ಸಿಕ್ಕ ನಂತರ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ ನಡೆಸಲಾಗುತ್ತದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

 


ಸಂಬಂಧಿತ ಟ್ಯಾಗ್ಗಳು

Gauri Lankesh SIT ಮಂಪರು ಪರೀಕ್ಷೆ ಹೊಟ್ಟೆ ಮಂಜ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ