2011 ರಿಂದ 2017ರ ಮಧ್ಯೆ 3ಲಕ್ಷ ಅಪಘಾತಗಳು

From 2011 to 2017 3 lakhs accidents has happened in karnataka

26-03-2018

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ವೇಗದ ಚಾಲನೆಯು ಹೆಚ್ಚುತ್ತಿರುವುದರಿಂದ ರಾಜ್ಯದ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಂದಾಗಿ ಪ್ರತಿಗಂಟೆಗೆ ಒಬ್ಬರು ಸಾವನ್ನಪ್ಪುತ್ತಿದ್ದು ಮೂರರಿಂದ ನಾಲ್ವರು ಗಾಯಗೊಳ್ಳುತ್ತಿದ್ದಾರೆ.

ಕಳೆದ ಏಳು ವರ್ಷದ ಮಾಹಿತಿ ಪ್ರಕಾರ ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ ಗಂಟೆಗೆ 27 ಮಂದಿ ಸಾವನ್ನಪ್ಪುತ್ತಿರುವುದು ಪೊಲೀಸ್ ಇಲಾಖೆಯಿಂದ ತಿಳಿದುಬಂದಿದೆ. ರಸ್ತೆಗಳು ಚೆನ್ನಾಗಿದ್ದರೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸರಿಯಾಗಿ ತರಬೇತಿ ಪಡೆಯದೇ ಅಜಾಗರೂಕವಾಗಿ ವಾಹನ ಚಲಾಯಿಸುವುದರಿಂದ ಹೆಚ್ಚಿನ ಅಪಘಾತಗಳು ಉಂಟಾಗುತ್ತಿವೆ ಎಂದು ತಜ್ಞರು ಆರೋಪಿಸುತ್ತಾರೆ.

ಲಭ್ಯವಿರುವ ಮಾಹಿತಿ ಪ್ರಕಾರ 2017ರಲ್ಲಿ ರಾಜ್ಯದ ವಿವಿಧ ಹೆದ್ದಾರಿಗಳಲ್ಲಿ ಸಂಭವಿಸಿದ್ದ 120 ಅಪಘಾತಗಳಲ್ಲಿ ಸುಮಾರು 153ಮಂದಿ ಪ್ರತಿದಿನ ಗಾಯಗೊಳ್ಳುತ್ತಿದ್ದಾರೆ. ಸರಾಸರಿಯಂತೆ ಪ್ರತಿನಿತ್ಯ 28 ಮಂದಿ ಜನರು ರಾಜ್ಯಹೆದ್ದಾರಿಗಳಲ್ಲಿ 10 ಜನರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವನ್ನಪ್ಪಿದ್ದಾರೆ.

2011 ಮತ್ತು 2017 ರ ಮಧ್ಯ ರಾಜ್ಯದಲ್ಲಿ 3 ಲಕ್ಷ ಅಪಘಾತಗಳಾಗಿವೆ. ಈ ಮಧ್ಯೆ 71,287 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. 3.91 ಲಕ್ಷ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೆದ್ದಾರಿಗಳಲ್ಲಿ ನಮ್ಮ ರಸ್ತೆಗಳು ಶೇ.3 ರಷ್ಟಿದ್ದರೂ ಶೇ. 60ರಷ್ಟು ಅಪಘಾತಗಳಾಗುತ್ತಿವೆ. ಸುರಕ್ಷಿತೆಗಿಂತಲೂ ವೇಗಕ್ಕೆ ತಕ್ಕಂತೆ ರಸ್ತೆ ವಿನ್ಯಾಸಗೊಳಿಸಿರುವುದಕ್ಕೆ ಇದಕ್ಕೆ ಕಾರಣ ಎನ್ನುತ್ತಾರೆ ಸಂಚಾರಿ ತಜ್ಞ ಎಂ.ಎನ್, ಶ್ರೀಹರಿ

ಮತ್ತೊಂದೆಡೆ ಪರಾವನಗಿ ನೀಡುವಲ್ಲಿ ಮಾರ್ಪಾಡು ಮಾಡಬೇಕಿದೆ ಎಂದು ಐಐಎಸ್ ಸಿ ಪ್ರೊಫೆಸರ್ ಅಶಿಶ್ ವರ್ಮಾ ಆಗ್ರಹಿಸುತ್ತಾರೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತ ನಿಯಂತ್ರಿಸಲು ಹಲವು ಕ್ರಮ ಕೈಗೊಂಡಿರುವುದಾಗಿ ಸಾರಿಗೆ  ಇಲಾಖೆ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.

ಈ ಉದ್ದೇಶಕ್ಕಾಗಿ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ರಸ್ತೆಗನುಗುಣವಾಗಿ ವೇಗದ ಮಿತಿ ಜಾರಿಗೊಳಿಸಲಾಗಿದೆ. ಸಾರಿಗೆ ವಾಹನಗಳಿಗೆ ಸ್ಪೀಡ್ ಗೌರ್ನರ್ ನ್ನು ಕಡ್ಡಾಯಗೊಳಿಸಲಾಗಿದೆ. ಗಂಟೆಗೆ 80 ಕಿಲೋ ಮೀಟರ್ ಗೂ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ. ಅಪಾಯಕಾರಿ ವಾಹನಗಳ ಮಿತಿಯನ್ನು ಗಂಟೆಗೆ 60ಕಿಲೋಮೀಟರ್ ನಿಗದಿಗೊಳಿಸಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

survey Accident ಅಪಘಾತ ತಜ್ಞರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ