ಕುಖ್ಯಾತ ಕಳ್ಳರ ಗ್ಯಾಂಗ್‍ ಬಂಧನ

Notorious thieves gang detention

26-03-2018

ಬೆಂಗಳೂರು: ಗಮನ ಬೇರೆಡೆಗೆ ಸೆಳೆದು ಚಿನ್ನಾಭರಣ ಇನ್ನಿತರ ಬೆಲೆ ಬಾಳೂವ ವಸ್ತುಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐವರಿದ್ದ ಕುಖ್ಯಾತ ಕಳ್ಳರ ಗ್ಯಾಂಗ್‍ನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮಂಡ್ಯದ ಹೆಚ್.ಕೊಡಿಹಳ್ಳಿ ಫಾರಂನ ಮಂಜುನಾಥ ಅಲಿಯಾಸ್ ಗಜೇಂದ್ರ (27), ಮಂಜುಳ ಅಲಿಯಾಸ್ ಅನು (22), ಪಾಂಡವರಪುರದ ಸಂತೋಷ ಅಲಿಯಾಸ್  ಜೀವಾ (26), ಮಳವಳ್ಳಿಯ ಕಾಗೇಪುರದ ರಮೇಶ ಅಲಿಯಾಸ್ ಹೊನ್ನ (22) ಗಿರಿಜಮ್ಮ (38) ಬಂಧಿತ ಆರೋಪಿಗಳಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಬಂಧಿತ ಗ್ಯಾಂಗ್‍ನಲ್ಲಿ ತಲೆಮರೆಸಿಕೊಂಡಿರುವ ಧನೇಂದ್ರ ಹಾಗೂ ರೇಖಾಗಾಗಿ ತೀವ್ರ ನಡೆಸಲಾಗಿದೆ ಬಂಧಿತ ಗ್ಯಾಂಗ್ ನಡೆಸಿದ್ದ ಜೆ.ಪಿ ನಗರ, ಗಿರಿನಗರ, ಕೆ.ಜಿ. ನಗರ, ಶಂಕರಪುರ, ವಿ.ವಿ.ಪುರ. ಪೊಲೀಸ್ ಠಾಣೆಗಳ ಒಟ್ಟು 8 ಗಮನ ಬೇರೆಡೆ ಸೆಳೆಯವ ಪ್ರಕರಣಗಳನ್ನು ಪತ್ತೆಹಚ್ಚಿ 10 ಲಕ್ಷ 47 ಸಾವಿರ ಮೌಲ್ಯದ 349 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ನಡೆಸುವ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ವಿ.ವಿ.ಪುರಂ ಉಪವಿಭಾಗದ ಎಸಿಪಿ ಎನ್.ಆರ್.ಮಹಾಂತರೆಡ್ಡಿ ಗಿರಿನಗರ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಮ್.ಕೊಟ್ರೇಶಿ ನೇತೃತ್ವ ವಿಶೇಷ ಪೊಲೀಸ್ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಗ್ಯಾಂಗ್‍ನ ಆರೋಪಿಗಳು ದೇವಸ್ಥಾನಗಳು, ಮಾಲ್‍ಗಳು, ಕಾಂಪ್ಲೆಕ್ಸ್, ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾರ್ ಪಾರ್ಕಿಂಗ್ ಸ್ಥಳ, ಬ್ಯಾಂಕ್‍ಗಳ ಬಳಿ ಬಂದು ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರಿಗೆ ಒಬ್ಬ ಆರೋಪಿ ಹಣವನ್ನು ರಸ್ತೆಯಲ್ಲಿ ಬಿಸಾಡಿ ಹೋಗುತ್ತಿದ್ದು, ಇನ್ನೊಬ್ಬ ರಸ್ತೆಯ ಮೇಲೆ ನಿಮ್ಮ ಹಣ ಬಿದ್ದಿದೆ ಎಂದು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು ಎಂದು ಅವರು ತಿಳಿಸಿದರು. ನೋಟನ್ನು ನೆಲದ ಮೇಲೆ ಬಿಸಾಡಿ ಯಾರದೋ ಹಣ ಬಿದ್ದಿದೆ ಎಂದು ಮಹಿಳೆಯರಿಗೆ ನಂಬಿಸುವುದು. ಜನನಿಬಿಡ ಪ್ರದೇಶದಲ್ಲಿ ವಯಸ್ಸಾದ ಮಹಿಳೆಯರ ಗಮನ ಬೇರೆಡೆಗೆ ಸೆಳೆಯವುದು. ದೇವಸ್ಥಾನಗಳ ಬಳಿ ದೇವರ ದರ್ಶನಕ್ಕೆ ಸಾಲಿನಲ್ಲಿ ನಿಂತು ಭಕ್ತಾಧಿಗಳಿಗೆ ತಿಳಿಯದಂತೆ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡುತ್ತಿದ್ದರು.

ಇದಲ್ಲದೇ ಆರೋಪಿಗಳು ಆಟೋ ರಿಕ್ಷಾದಲ್ಲಿ ಬಂದು ಬಸ್‍ಗಾಗಿ ಕಾಯುತ್ತಿದ್ದ ಮಹಿಳೆಯರನ್ನು ವಿಚಾರಿಸಿ ಎಲ್ಲಿಗೇ ಹೋಗುತ್ತಿರಿ ಎಂದು ಕೇಳಿ ಅವರು ಹೋಗುವ ಸ್ಥಳಕ್ಕೆ ತಾವೂ ಅಲ್ಲಿಗೆ ಹೋಗುತ್ತೇವೆ ನಮ್ಮ ಜೊತೆಯಲ್ಲಿ ಬನ್ನಿ ಅಲ್ಲಿಗೆ ಬಿಡುತ್ತೇವೆಂದು ನಂಬಿಸಿ ಆಟೋ ಹತ್ತಿಸಿಕೊಂಡು ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

arrested thives ಭಕ್ತಾಧಿ ಆಟೋ ರಿಕ್ಷಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ