ಗುಂಡಿಗೆ ಬಿದ್ದಿದ್ದ ಮರಿ ಆನೆ ರಕ್ಷಣೆ

Baby Elephant Protected by forest staff

26-03-2018

ಬೆಂಗಳೂರು: ನಗರದ ಹೊರವಲಯದ ಆನೇಕಲ್‍ನ ನಾಯಕನಪಲ್ಲಿ ಬಳಿ ಪೈಪ್ ಲೈನ್ ಗುಂಡಿಗೆ ಬಿದ್ದು ಮೇಲೇಳಲಾಗದೇ ಒದ್ದಾಡುತ್ತಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಆನೇಕಲ್ ಗಡಿಗೆ ಹೊಂದಿಕೊಂಡಿರುವ ಹೊಸೂರು ಸಮೀಪದ ನಾಯಕನಪಲ್ಲಿಗೆ ನಿನ್ನೆ ತಡರಾತ್ರಿ ಆಹಾರ ಅರಸಿ ಬಂದಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಸುಮಾರು 3 ವರ್ಷದ ಆನೆ ಕತ್ತಲಲ್ಲಿ ಪೈಪ್ ಲೈನ್ ಗುಂಡಿಗೆ ಸಿಲುಕಿಕೊಂಡಿದೆ.

ಮರಿಯಾನೆ ಪೈಪ್ ಲೈನ್ ಗುಂಡಿಯಲ್ಲಿ ಸಿಲುಕಿ ಘೀಳಿಟ್ಟಿದ್ದು, ಮುಂಜಾನೆ ಗ್ರಾಮಸ್ಥರು ಬಂದು ನೋಡಿದ್ದಾರೆ. ನಂತರ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಮರಿಯಾನೆಯನ್ನು ರಕ್ಷಿಸಿದ್ದಾರೆ. ಬೇಸಿಗೆ ಪ್ರಾರಂಭದಲ್ಲಿ ಆನೆಗಳು ಮತ್ತೆ ನಾಡಿನಲ್ಲಿ ಪ್ರತ್ಯಕ್ಷವಾಗುತ್ತಿವೆ. ಇದರಿಂದ ಗ್ರಾಮಸ್ಥರು ಹೊಲ ತೋಟಗಳತ್ತ ತೆರಳಲು ಹೆದರುತ್ತಿರುವ ಪರಿಸ್ಥಿತಿ ಎದುರಾಗಿದೆ.


ಸಂಬಂಧಿತ ಟ್ಯಾಗ್ಗಳು

elephant wild animals ಪೈಪ್ ಲೈನ್ ಗ್ರಾಮಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ