ರಾಹುಲ್ ಗೆ ಪ್ರಬುದ್ಧತೆ ಬೇಕು: ದೇವೇಗೌಡ

Deve Gowda press meet at bangalore

26-03-2018

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಇಂದಿರಾ ಗಾಂಧಿ ಕಾಂಗ್ರೇಸ್ ಸೋನಿಯ ಗಾಂಧಿ  ಕಾಂಗ್ರೇಸ್, ಇಲ್ಲವೇ ಸಿದ್ಧರಾಮಯ್ಯ ಕಾಂಗ್ರೇಸ್ ಎಂಬುದು ತೀರ್ಮಾನ ಆಗಬೇಕು. ಇನ್ನೂ ಬೆಳೆಯುವ ನಾಯಕ ರಾಹುಲ್ ಮಾತಿನಲ್ಲಿ ಪ್ರಬದ್ಧತೆ ಬೇಕು ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮ ಗೋಷ್ಠಿ ನಡೆಸಿದ ದೇವೇಗೌಡ, ಕಾಂಗ್ರೆಸ್, ರಾಹುಲ್ ಗಾಂಧಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿ ಎಸ್ ನಿಂದ ಕಾಂಗ್ರೆಸ್ ಸೇರಿದ ಏಳು ಶಾಸಕರ ವಿರುದ್ದ ಹರಿಹಾಯ್ದರು. ಏಳು ಜನ ಈವರೆಗೆ ಎಲ್ಲಿದ್ದರು, ಕಾಂಗ್ರೆಸ್ ಸೇರಿದ ಕೂಡಲೇ ಇವರೆಲ್ಲಾ ಶುದ್ದ ವ್ಯಕ್ತಿಗಳಾದರಾ? ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ಎಚ್.ಡಿ.ಡಿ.ಕಿಡಿಕಾರಿದರು.

ರಾಹುಲ್‌ಗೆ ಇದರ ಹಿನ್ನಲೆ ಅರ್ಥಮಾಡಿಕೊಳ್ಳುವ ಪ್ರಬುದ್ದತೆ ಇರಬೇಕಿತ್ತು, ಸೋನಿಯಾ ಕೂಡ ರಾಹುಲ್ ಆದೇಶ ಪಾಲಿಸುವಂತೆ ಹೇಳಿದ್ದಾರೆ. ಆದರೆ ನಾವು ರಾಹುಲ್ ಆದೇಶ, ಮೋದಿ ಆದೇಶ ಪಾಲನೆ ಮಾಡಬೇಕಿಲ್ಲ ಎಂದು ದೇವೇಗೌಡ ಗುಡುಗಿದರು.

ಮೇ.11 1996ರಲ್ಲಿ ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ರಚನೆಗೆ ಬೆಂಬಲ ಕೊಡುವುದಾಗಿ ಕಾಂಗ್ರೆಸ್ ಹೇಳಿತ್ತು. ಚಂದ್ರಶೇಖರ್, ಚರಣ್ ಸಿಂಗ್ ರಂತೆ ನನಗೂ ನೆಹರೂ ಕುಳಿತ ಜಾಗದಲ್ಲಿಹೆಚ್ಚು ಕಾಲ ಕೂರಲು ಬಿಟ್ಟಿಲ್ಲ ಎಂದು ಹಳೆಯ ಘಟಕಗಳನ್ನು ನೆನಪಿಸಿಕೊಂಡು ದೇವೇಗೌಡ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ದೇವೇಗೌಡ ಅಂದರೆ ಏನೆಂದುಕೊಂಡಿದ್ದೀರಿ. ಬಾಬರಿ ಮಸೀದಿ ದ್ವಂಸ ಮಾಡಿದ್ದಾಗ ದೇವೇಗೌಡ ಪ್ರಧಾನಿಯಾ? ನನ್ನ ತಾಳ್ಮೆಗೂ ಒಂದು ಮಿತಿ ಇದೆ, ಯಾರೋ ಬರೆದುಕೊಟ್ಟ ಚೀಟಿ ಓದುವುದಲ್ಲ ಎಂದು ದೇವೇಗೌಡರು ಬಾಣ ಬಿಟ್ಟರು.

ಸೋನಿಯಾ ಪ್ರತಿಪಕ್ಷ ನಾಯಕಿ ಆದಾಗ 19 ಚರ್ಚ್ ದ್ವಂಸ ಮಾಡಿದಾಗ ಏನು ಮಾಡುತಿದ್ರಿ. ಸೋನಿಯಾ ದೇಶದ ಪ್ರಜೆ ಹೌದೋ ಅಲ್ಲವೋ ಎನ್ನುವ ಚರ್ಚೆ ವೇಳೆ ಪ್ರಧಾನಿ ಆಗಲಿ ಎಂದವನು ನಾನು. ಸ್ವಲ್ಪವೂ ಕೃತಜ್ಞತೆ ಬೇಡವೇ? ಪ್ರಶ್ನೋತ್ತರ ವೇಳೆಯಲ್ಲಿ ವಾಕ್ ಔಟ್ ಮಾಡುತ್ತೀರಾ ಎಂದು ದೇವೇಗೌಡ ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಂತರ ದೇವೇಗೌಡರ ವಾಗ್ಬಾಣ ರಾಹುಲ್ ಗಾಂಧಿ ಕಡೆಗೆ ತಿರುಗಿತು. ನೀವು ನನ್ನನ್ನು ಪ್ರಶ್ನೆ ಮಾಡಿತ್ತೀರಾ? ಎಂದುಭವಿಷ್ಯದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಗೋದ್ರಾ ಘಟನೆ ಯಾವಾಗ ಸಂಭವಿಸಿತು, ಅಂದು ಲೋಕಸಭೆಯಲ್ಲಿ ಈ ವಿಷಯ ಇಟ್ಟು ಹೋರಾಟ ನಡೆಸಿದ್ದೆ ದೇವೇಗೌಡ ಎಂದು ನೆನಪಿಸಿಕೊಂಡರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ