ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ

gramin Bank Employees strike..!

26-03-2018

ರಾಯಚೂರು: ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣಕ್ಕೆ ವಿರೋಧ ಮತ್ತು ಗ್ರಾಮೀಣ ಬ್ಯಾಂಕ್ ನ ಉದ್ಯೋಗಿಗಳಿಗೆ ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಗ್ರಾಮೀಣ ಬ್ಯಾಂಕ್ ಗಳನ್ನು ಬಂದ್ ಮಾಡಿ ನೌಕರರು ಪ್ರತಿಭಟನೆಗಿಳಿದಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಗ್ರಾಮೀಣ ಬ್ಯಾಂಕ್ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮುಷ್ಕರ ಬೆಂಬಲಿಸಿ ರಾಯಚೂರಿನಲ್ಲೂ ಬ್ಯಾಂಕ್ ಬಂದ್ ಆಚರಿಸಿಲಾಗುತ್ತಿದ್ದು, ಜಿಲ್ಲೆಯ 60 ಗ್ರಾಮೀಣ ಬ್ಯಾಂಕ್ಗಳು ಕೂಡಾ ಬಂದ್ ಮಾಡಲಾಗಿದೆ. 

ರಾಯಚೂರಿನ ಪ್ರಗತಿ ಕೃಷ್ಣ  ಗ್ರಾಮೀಣ ಬ್ಯಾಂಕಿನ ಮುಂದೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ನೌಕರರು ಹಾಗು ಅಧಿಕಾರಿಗಳ ಸಂಘ ಮುಷ್ಕರಕ್ಕೆ ಸಾಥ್ ನೀಡಿದ್ದಾರೆ. ಮುಷ್ಕರದಿಂದ ಗ್ರಾಮೀಣ ಬ್ಯಾಂಕ್ ವ್ಯವಹಾರ ಇಡೀವಾರ ಸ್ಥಗಿತಗೊಳ್ಳಲಿದೆ. ಮಾರ್ಚ್ 29ರಂದು ಮಹಾವೀರ ಜಯಂತಿ, 30ಗುಡ್ ಫ್ರೈಡೇ, 31 ಬ್ಯಾಂಕ್ ಲೆಕ್ಕ ಕ್ಲೋಸಿಂಗ್ ಡೇ, ಎಪ್ರಿಲ್ 1 ಭಾನುವಾರ, ಹೀಗಾಗಿ ಗ್ರಾಮೀಣ ಬ್ಯಾಂಕ್ ಮುಷ್ಕರದ ಬಿಸಿ ಗ್ರಾಹಕರಿಗೆ ತಟ್ಟಲಿದೆ.‌


ಸಂಬಂಧಿತ ಟ್ಯಾಗ್ಗಳು

protest gramin bank ಗ್ರಾಮೀಣ ಬ್ಯಾಂಕ್ ನೌಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ