ನಿಧಿ ಆಸೆಗಾಗಿ 8ಅಡಿ ಗುಂಡಿ ಅಗೆದರು..!

For the treasure: they dug 8 feet..!

26-03-2018

ಆನೇಕಲ್: ಅತ್ತಿಬೆಲೆಯ ಟಿವಿಎಸ್ ರಸ್ತೆಯಲ್ಲಿರುವ ಶಂಕರ್ ಎಂಬುವರಿಗೆ ಸೇರಿದ ಜಮೀನಿನಲ್ಲಿ, ನಿಧಿ ಆಸೆಗಾಗಿ ಸುಮಾರು 8ಅಡಿ ಹಳ್ಳ ತೋಡಿದ ಆರೋಪದ ಜಮೀನಿನ ವಾರಸುದಾರ ಶಂಕರ್ನನ್ನು ಪೊಲೀಸರು ಬಂಧಿಸಿದ್ದಾರೆ. ಎಂಟು ಅಡಿ ಅಗೆದರೂ ನಿಧಿ ಸಿಗದಿದ್ದು, ಇನ್ನೂ ನಾಲ್ಕು ಅಡಿ ಗುಂಡಿ ತೋಡಲು ಮಣ್ಣು ಕೆಲಸದವರಿಗೆ ತಾಕೀತು ಮಾಡಿದ್ದಾರೆ. ಅಲ್ಲದೇ ಸ್ನಾನ ಮುಗಿಸಿ ಪೂಜೆ ಮಾಡಿ ಗುಳಿ ಅಗೆಯಲು ಜಮೀನುದಾರ ಧಮ್ಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಭೀತಿಗೊಂಡ ಮಣ್ಣು ಕೆಲಸದ ನಾಗರಾಜ್ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅತ್ತಿಬೆಲೆ ಪೊಲೀಸರು ಪರಿಶೀಲನೆ ನಡೆಸಿ, ಜಮೀನುದಾರ ಶಂಕರ್ ಎಂಬುವುರನ್ನು ಬಂಧಿಸಿದ್ದಾರೆ. ಗುಳಿ ಅಗೆಯುವ ಮುಂಚೆ ಪೂಜೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಧಿಯಾಸೆ ಹುಟ್ಟಿಸಿದ ಪೂಜಾರಿಯ ಮಾತು ಕೇಳಿ ತನ್ನದೇ ಜಮೀನಿನಲ್ಲಿ ಹಳ್ಳ ತೋಡಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

 

 

 


ಸಂಬಂಧಿತ ಟ್ಯಾಗ್ಗಳು

treasure land ನಿಧಿ ಪೂಜಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ