ಪ್ರಶಸ್ತಿ ತಿರಸ್ಕರಿಸಿದ ರೂಪಾ ಮೌದ್ಗೀಲ್

Roopa Moudgil rejected the award

25-03-2018

ರಾಜಕೀಯ ವಾಸನೆ ಇರುವ ಸಂಸ್ಥೆಯಿಂದ ಪ್ರಶಸ್ತಿ ಸ್ವೀಕರಿಸಲಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರೂಪಾ ಮೌದ್ಗೀಲ್ ಹೇಳಿದ್ದಾರೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಕೊಡುವ 2018ನೇ ಸಾಲಿನ ಪ್ರಶಸ್ತಿಗೆ ಭಾಜನರಾದ ಹಲವರಲ್ಲಿ ಒಬ್ಬರಾದ ರೂಪಾ ಮೌದ್ಗೀಲ್, ಚುನಾವಣೆ ಹತ್ತಿರ ವಾಗುತ್ತಿರುವ ಸಂದರ್ಭದಲ್ಲಿ ಒಂದು ರಾಜಕೀಯ ಪಕ್ಷಕ್ಕೆ ಹತ್ತಿರವಾದ ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡುವ ಪ್ರಶಸ್ತಿಯನ್ನು ಪಡೆಯುವುದು ಒಬ್ಬ ಪೊಲೀಸ್ ಅಧಿಕಾರಿಗೆ ಸೂಕ್ತವಲ್ಲ, ಹಾಗೇ ಈ ಬಾರಿ ಪ್ರಶಸ್ತಿಯೊಂದಿಗೆ ಕೊಡುವ ನಗದನ್ನೂ ಒಂದು ಲಕ್ಷದಿಂದ ಎರಡು ಲಕ್ಷಕ್ಕೆ ಏರಿಸಿರುವುದು ಒಬ್ಬ ಅಧಿಕಾರಿಗೆ ಆಮಿಷ ಒಡ್ಡಿದಂತೆ ಆಗುತ್ತದೆ ಎಂದು ಕೂಡ ಹೇಳಿದ್ದಾರೆ. ನಮ್ಮ ಬೆಂಗಳೂರು ಪ್ರತಿಷ್ಠಾನಕ್ಕೆ ಕೈ ಬರಹದಲ್ಲಿ ಬರೆದ  ಪತ್ರದಲ್ಲಿ ಅವರು ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ ಪ್ರತಿಷ್ಠಾನವನ್ನು ವಂದಿಸುತ್ತ ತಾವು ಯಾಕೆ ಪ್ರಶಸ್ತಿಯನ್ನು ಪಡೆಯುತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸಂಸದ ರಾಜೀವ್ ಚಂದ್ರಶೇಖರ್ ಅವರದ್ದಾಗಿದ್ದು, ಇಲ್ಲಿವರೆಗ ಸ್ವತಂತ್ರ ಸಂಸದರಾಗಿದ್ದ ಚಂದ್ರಶೇಖರ್ ಅವರ ಈ ಸಂಸ್ಥೆ ಯಾವುದೇ ವಿವಾದವನ್ನೂ ಮೈಗೆಳೆದುಕೊಂಡಿರಲಿಲ್ಲ ಆದರೆ ಇತ್ತೀಚೆಗೆ ಬಿಜೆಪಿ ವತಿಯಿಂದ ಸಂಸದರಾಗಿ ಅವರು ಆಯ್ಕೆಯಾದ ಮೇಲೆ ಅವರ ಸಂಸ್ಥೆಯಾದ ನಮ್ಮ ಬೆಂಗಳೂರು ಪ್ರತಿಷ್ಠಾನ ಒಂದು ಬಿಜೆಪಿ ಅಂಗ ಸಂಸ್ಥೆಯಾಗಿ ಗುರುತಿಸಲ್ಪಡುತ್ತಿದೆ. ಇನ್ನು ಮುಂದೆ ಪ್ರತಿಷ್ಠಾನ ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾರ್ಯಾರು ಅದರೊಂದಿಗೆ ಕೈಜೋಡಿಸುತ್ತಾರೆ ಎಂದು ಕಾಡು ನೋಡಬೇಕಷ್ಟೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ