‘ಜನರು ಹಣ,ಜಾತಿ ನೋಡಿ ಮತ ಹಾಕಲ್ಲ’24-03-2018

ಶಿವಮೊಗ್ಗ: ರಾಜ್ಯದ ಜನ ಹಣ, ಜಾತಿ ನೋಡಿ ಮತ ಹಾಕುವುದಿಲ್ಲ, ರಾಜ್ಯದ ಜನ ಪ್ರಜ್ಞಾವಂತರಿದ್ದಾರೆ ಎಂದು ಜೆಡಿಎಸ್ ನಾಯಕ ಪಿ.ಜಿ.ಆರ್ ಸಿಂಧ್ಯಾ ಹೇಳಿದ್ದಾರೆ. ರಾಜ್ಯದ ಮುಂದಿನ ಚುನಾವಣೆ ರಾಷ್ಟ್ರ ರಾಜಕಾರಣಕ್ಕೆ ದೊಡ್ಡ ತಿರುವು ನೀಡುತ್ತದೆ ಎಂದರು. ಜೆಡಿಎಸ್ ನಲ್ಲಿ ಸಾಮೂಹಿಕ ನಾಯಕತ್ವ ಇದೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ರೈತರಿಗೆ ಒತ್ತು ನೀಡಲಾಗುತ್ತಿದೆ ಎಂದ ಅವರು, ಜೆಡಿಎಸ್ ಅಪ್ಪ ಮಕ್ಕಳ ಪಕ್ಷ  ಎಂದು ಪಕ್ಷದ ಮೇಲೆ ವ್ಯವಸ್ಥಿತ ಪಿತೂರಿ ಮಾಡಲಾಗುತ್ತಿದೆ ಎಂದು ದೂರಿದರು. ಕರ್ನಾಟಕವನ್ನು ಕರ್ನಾಟಕದವರೇ ಆಳಬೇಕು ಗುಜರಾತ್ ನವರಿಂದಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

 

 

 

 

 


ಸಂಬಂಧಿತ ಟ್ಯಾಗ್ಗಳು

pgr sindhia JDS ಹಣ, ಜಾತಿ ಪ್ರಜ್ಞಾವಂತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ