ಆಕಸ್ಮಿಕ ಬೆಂಕಿ ತಗುಲಿ 10 ಗುಡಿಸಲುಗಳು ಭಸ್ಮ

Accidental fire on 10 huts: completely burned

24-03-2018

ತುಮಕೂರು: ಆಕಸ್ಮಿಕ ಬೆಂಕಿ ತಗುಲಿ 10 ಗುಡಿಸಲು ಭಸ್ಮವಾಗಿರುವ ದುರ್ಘಟನೆ ತುಮಕೂರಿನ ತುರುವೇಕೆರೆ ಪಟ್ಟಣದ ಮೀನಾಕ್ಷಿ ನಗರದಲ್ಲಿ ತಡರಾತ್ರಿ ನಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಯ ಕೆನ್ನಾಲಗೆಗೆ ಸುಮಾರು 10 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಗುಡಿಸಲಿನಲ್ಲಿದ್ದ ಯಾವೊಂದು ವಸ್ತು ಉಳಿಯದೇ ವಸ್ತುಗಳು ಸುಟ್ಟು ಬೂದಿಯಾಗಿವೆ. ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ 10 ಕುಟುಂಬಗಳು ಬೀದಿಗೆ ಬಿದ್ದಿವೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

fire Huts ಕುಟುಂಬ ಪ್ರಾಣಾಪಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ