ಮತದಾರರನ್ನು ಸೆಳೆಯಲು ಕಸರತ್ತು ಶುರು

Lakshmi hebbalkar distributed gas stove and other things to voters

24-03-2018

ಬೆಳಗಾವಿ: ರಾಜ್ಯ ವಿಧಾಸಭೆ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಕಸರತ್ತು ನಡೆಸುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಕ್ಷೇತ್ರದ ಮತರಾರಿಗೆ ಗ್ಯಾಸ್ ಸ್ಟೋವ್ ವಿತರಣೆ ಮಾಡಿದ್ದಾರೆ. ಇನ್ನೊಂದೆಡೆ ಖಾನಾಪುರ ತಾಲ್ಲೂಕಿನಲ್ಲಿ ಮತದಾರರಿಗೆ ಲೈಸನ್ಸ್ ಭಾಗ್ಯವನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಅಂಜಲಿ ನಿಂಬಾಳ್ಕರ್ ನೀಡಿದ್ದಾರೆ. ಒಂದೇ ದಿನ 1500 ಮತದಾರರಿಗೆ ಲರ್ನಿಂಗ್ ಲೈಸನ್ಸ್ ಹಂಚಿಕೆ ಮಾಡಿದ್ದಾರೆ. ಅಂಜಲಿತಾಯಿ ನಿಂಬಾಳ್ಕರ್ ಪೌಂಢೇಶನ್ ವತಿಯಿಂದ ಹಂಚಿಕೆ ಮಾಡಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಮರಾಠಿ ಪ್ರಾಬಲ್ಯದ ಮತದಾರರನ್ನು ಸೆಳೆಯಲು ಪ್ರಯತ್ನಗಳನ್ನು ಶುರುವಿಟ್ಟುಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Lakshmi Hebbalkar KPCC ಮತ ಕ್ಷೇತ್ರ ಲೈಸನ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ