ಹೊಟೇಲ್ ಗೆ ನುಗ್ಗಿ ಪುಂಡರ ಅಟ್ಟಹಾಸ

Hotel owner assault by a gang in kaggadasapura

24-03-2018

ಬೆಂಗಳೂರು: ಹೊಟೇಲ್ ಗೆ ನುಗ್ಗಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ನಗರದ ಕಗ್ಗದಾಸಪುರ ರೈಲ್ವೆ ಕ್ರಾಸ್ ಬಳಿಯ ಉಡುಪಿ ರುಚಿ ಹೋಟೆಲ್ ಗೆ ನುಗ್ಗಿದ ಏಳೆಂಟು ಮಂದಿ ಪುಂಡರು, ದಾಂಧಲೆ ನಡೆಸಿ, ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪುಂಡರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾಲೀಕನನ್ನು ಹೆಲ್ಮೆಟ್ ಮತ್ತು ಚೇರ್ ನಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನೆಲಕ್ಕೆ ಹಾಕಿಕೊಂಡು ತುಳಿದು ಕಲ್ಲಿನಿಂದ ತಲೆ ಜಜ್ಜಿದ್ದಾರೆ. ಇರಿಂದ ತೀವ್ರ ಗಾಯಗಳಾಗಿರುವ ಹೊಟೇಲ್ ಮಾಲೀಕ ಪ್ರಕಾಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕೊಲೆ ಆರೋಪದಡಿ ಆರೋಪಿಗಳನ್ನು ಬಂಧಿಸಬೇಕಾದ ಮಹದೇವಪುರ ಪೊಲೀಸರು ಬೇರೆಯದೆ ಸೆಕ್ಷನ್ ಹಾಕಿ ಆರೋಪಿಗಳನ್ನು ಬಚಾವ್ ಮಾಡಲು ನಿಂತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Hotel police ಸಿಸಿಟಿವಿ ಅಟ್ಟಹಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ