ಎಂ.ಬಿ.ಪಾಟಿಲ್ ಮೇಲೆ ಮತ್ತೆ ಹರಿಹಾಯ್ದ ಬಿಎಸ್ ವೈ

B.S yeddyurappa v/s M.B patil

23-03-2018

ತುಮಕೂರು: ರಾಜ್ಯಸಭಾ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಜನ ಶಾಸಕರ ಬೆಂಬಲವಿದೆ ಹಾಗಾಗಿ ನಮ್ಮ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಗೆಲವು ಸಾಧಿಸುತ್ತಾರೆ ಎಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್ ವಿರುದ್ದ ಮತ್ತೆ ಹರಿಹಾಯ್ದ ಬಿಎಸ್ ವೈ, ಎಂ.ಬಿ ಪಾಟೀಲ್‌ಗೆ ನೇರವಾಗಿ ಹೇಳಲು ಬಯಸುತ್ತೇನೆ, ವಿಶ್ವೇಶ್ವರಯ್ಯ ಜಲ ನಿಗಮದ ಕಾಮಗಾರಿ ಗುತ್ತಿಗೆ ನೀಡಿರುವುದರಲ್ಲಿ ಅವ್ಯವಹಾರ ನಡೆದಿರೋದು ಸತ್ಯ. ನಾನು ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣ ಲೋಪದೋಷಗಳಿದ್ದರೂ ಅವರು ಹೇಳಿದಂತೆ ಕೇಳಲು ನಾನು ಸಿದ್ಧನಿದ್ದೇನೆ ಎಂದರು.

ವಿಶ್ವೇಶ್ವರಯ್ಯ ಜಲ ನಿಗಮದ 156 ಕೋಟಿ ಕಾಮಗಾರಿಯಲ್ಲಿ ಹೊರರಾಜ್ಯದವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ನಾವು ಅದಕ್ಕೆ ಆಕ್ಷೇಪ ಮಾಡಿದ ಮೇಲೆ ಎರಡು ದಿನದ ಹಿಂದೆ ವಿತ್ ಡ್ರಾ ಮಾಡಿದ್ದೇವೆ ಎಂದು ಹೇಳಿದ್ದಾರೆ. 25 ಕೋಟಿ ಕಮಿಷನ್ ಹೊಡೆದು, ಕಾಮಗಾರಿ ಗುತ್ತಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ ಅವರು, ಇಷ್ಟು ದೊಡ್ಡ ಕಾಮಗಾರಿ ಹೊರ ರಾಜ್ಯದವರಿಗೆ ಕೊಟ್ಟಿರುವ ಉದ್ದೇಶವೇನು, ಇದು ಅಕ್ಷಮ್ಯ ಅಪರಾಧ  ಎಂದು ಕಿಡಿಕಾರಿದ್ದಾರೆ.

'ಇದೆಲ್ಲವೂ ಕಾಂಗ್ರೆಸ್ ಪಕ್ಷದ ಸರ್ಕಾರದ ದೊಂಬರಾಟ ಅಲ್ಲದೇ ಮತ್ತೇನು'. ಈಗ ನನ್ನ ವಿರುದ್ಧ ಅವಾಚ್ಯ ಪದ ಬಳಸಿ ಮಾತನಾಡುತ್ತಿರುವುದು ಅವರ ಯೋಗ್ಯತೆ ತಿಳಿಸುತ್ತದೆ ಎಂದು ಹರಿಹಾಯ್ದರು.


ಸಂಬಂಧಿತ ಟ್ಯಾಗ್ಗಳು

yeddyurappa M.B patil ಅವಾಚ್ಯ ಯೋಗ್ಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ