ಮಹಿಳೆಯರ ಮೇಲೆ ದೌರ್ಜನ್ಯ: ಅಧ್ಯಯನ ವರದಿ ಸಿಎಂಗೆ

Violence Against Women: Study report submitted to CM

23-03-2018

ಬೆಂಗಳೂರು: ಕಾಂಗ್ರೆಸ್ ಮುಖಂಡ ಹಾಗು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ನೇತೃತ್ವದ ಮಹಿಳೆಯರ ಮೇಲಿನ ದೌರ್ಜನ್ಯ ಅಧ್ಯಯನ ಸಮಿತಿ ಬೆಂಗಳೂರಿನಲ್ಲಿ ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತು. ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ನಡೆಸಿರುವ ಅಧ್ಯಯನ ವರದಿ ಇದಾಗಿದೆ. ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ವಿಧಾನಸೌಧದ ಸಿಎಂ ಕಚೇರಿಯಲ್ಲಿ 135 ಶಿಫಾರಸ್ಸು ಒಳಗೊಂಡ 6000ಪುಟಗಳ ವರದಿ ಸಲ್ಲಿಸಿದ್ದಾರೆ.

ಅತ್ಯಾಚಾರಿಗಳಿಗೆ ಮತದಾನ ಹಕ್ಕು ತೆಗೆಯಿರಿ. ದೌರ್ಜನ್ಯಕ್ಕೆ ಒಳಗಾದವರಿಗೆ ದೌರ್ಜನ್ಯ ನಡೆಸಿದವರ ಆಸ್ತಿ‌ಮುಟ್ಟು ಗೋಲು ಹಾಕಿಕೊಳ್ಳುವಂತೆ ಮತ್ತು ಐದು ತಿಂಗಳಲ್ಲಿ ಈ ವರದಿ ಜಾರಿಗೆ ತನ್ನಿ ಎಂದು ವರದಿ ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ. ಜನತಾ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತರಲೂ ಶಿಫಾರಸ್ಸು ಮಾಡಲಾಗಿದೆ. ವರದಿಯ ಬಗ್ಗೆ ಸಂಕ್ಷಿಪ್ತ ವಿವರ ನೀಡಿ ಸಿಎಂಗೆ ವರದಿ ಸಲ್ಲಿಸಿದ್ದಾರೆ ವಿ.ಎಸ್.ಉಗ್ರಪ್ಪ.

 


ಸಂಬಂಧಿತ ಟ್ಯಾಗ್ಗಳು

v.s.ugrappa rape ಸಂಕ್ಷಿಪ್ತ ಶಿಫಾರಸ್ಸು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ