ಹಿರಿಯ ಸ್ವಾತಂತ್ರ್ಯಹೋರಾಟಗಾರ ಮಹಾದೇವ ಪಟ್ಟಣ ನಿಧನ

Ex-MLA Mahadevappa Pattan passes away

23-03-2018

ಬೆಳಗಾವಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗು ಮಾಜಿ ಶಾಸಕ ಮಹಾದೇವ ಪಟ್ಟಣ (108) ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಿಧನರಾಗಿದ್ದಾರೆ. ಪುತ್ರ ಹಾಲಿ ಶಾಸಕ ಅಶೋಕ ಪಟ್ಟಣ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮಹಾದೇವಪ್ಪ ಪಟ್ಟಣ ರಾಮದುರ್ಗ ಅರಸರ ವಿರುದ್ಧ ಕರ ನಿರಾಕರಣೆ ಚಳುವಳಿ ನಡೆಸಿದ್ದರು‌. ಮಹಾದೇವ ಪಟ್ಟಣಗೆ ಕಂಡಲ್ಲಿ ಗುಂಡು ಹೊಡೆಯಲು ಬ್ರಿಟಿಷ್ ಸರ್ಕಾರದ ಆದೇಶವಿತ್ತು. 8 ವರ್ಷ ಭೂಗತರಾಗಿದ್ದ ಮಹಾದೇವಪ್ಪ, ಸ್ವಾತಂತ್ರ್ಯ ನಂತರ ರಾಮದುರ್ಗ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಮಹಾದೇವಪ್ಪ ಪಟ್ಟಣ ಪತ್ನಿ, ಶಾಸಕಿಯಾಗಿದ್ದು, ಇದೀಗ ಪುತ್ರ ಅಶೋಕ ಪಟ್ಟಣ ಎರಡನೇ ಅವಧಿಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಹಾದೇವ ಪಟ್ಟಣ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ