ರಾಹುಲ್ ವಿರುದ್ಧ ಸಿ.ಟಿ ರವಿ ಕಿಡಿ

C.T.Ravi questioned siddaramaiah

22-03-2018

ಚಿಕ್ಕಮಗಳೂರು: ಈ ಹಿಂದೆ ರಾಹುಲ್ ಗಾಂಧಿಗೇಕೆ ಚಿಕ್ಕಮಗಳೂರು ನೆನಪಾಗಲಿಲ್ಲ ಎಂದು, ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅಜ್ಜಿ ಚಿಕ್ಕಮಗಳೂರಿಗೆ ಸ್ಯಾಂಕ್ಷನ್ ಮಾಡಿಸಿದ್ದ ರೈಲು ಬರೋಕೆ 40 ವರ್ಷ ಬೇಕಾಯ್ತು, ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಹುಲ್ಗೆ ಚಿಕ್ಕಮಗಳೂರು ನೆನಪಾಗಿದೆ, ಎಂದು ಲೇವಡಿ ಮಾಡಿದ್ದಾರೆ. ಒಂದು ಕಾಲದಲ್ಲಿ ಚಿಕ್ಕಮಗಳೂರು ಕಾಂಗ್ರೆಸ್ ಭದ್ರಕೋಟೆ ಆಗಿತ್ತು, ಜ‌ನ ಈಗ ಅದನ್ನು ಛಿದ್ರ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಂದೂಗಳು ಈಗ ನೆನಪಾಗಿದ್ದಾರೆ. ಲೂಟಿ ರವಿ ಅನ್ನೋ ಮೂಲಕ ಚಿಕ್ಕಮಗಳೂರು ಜನತೆಗೆ ಸಿಎಂ ಅವಮಾನ ಮಾಡಿದ್ದಾರೆ, ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರು. ನಾನು ನಿಮ್ಮ ಸಿದ್ಧಾಂತ ಒಪ್ಪದೇ ಇರಬಹುದು ಆದರೆ ಲೂಟಿ ಮಾಡಿಲ್ಲ, ನಾನು ಲೂಟಿ ಮಾಡಿದ್ದೇ ಆಗಿದ್ರೆ ನೀವ್ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Rahul gandhi Insult ಸಿ.ಟಿ.ರವಿ ಸಿದ್ದರಾಮಯ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ