'ಲೋಕಸಭೆ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿಲ್ಲ’22-03-2018

ಬೆಂಗಳೂರು: ಲೋಕಸಭೆ ಅಧಿವೇಶನ ನಡೆಯುತ್ತಿದ್ದರೂ ಚರ್ಚೆ ನಡೆಯುತ್ತಿಲ್ಲ. ಬೆಳಿಗ್ಗೆ ಹೋಗುವುದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಬರುವ ಪರಿಸ್ಥಿತಿ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಪಕ್ಷದ ಕಾರ್ಯಕರ್ತರನ್ನು ನಾನು ಲಘುವಾಗಿ ಪರಿಗಣಿಸುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷದ ಮಧ್ಯೆ ಒಂದು ಪ್ರಾದೇಶಿಕ ಪಕ್ಷ ಉಳಿಯಬೇಕು ಎಂದು ದೇವೇಗೌಡ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ರಾಜಕೀಯದಲ್ಲಿ ಪಳಗಬೇಕು, ಗಂಭೀರತೆಯಿಂದ ಇರಬೇಕು.ಒಂದು ದಿನವಾದರೂ ಸಿದ್ದರಾಮಯ್ಯ ಸೌಜನ್ಯದಿಂದ ಮಾತನಾಡಿದ್ದರೆ ನಾನು ತಲೆ ಬಾಗುತ್ತೇನೆ ಎಂದು ದೇವೇಗೌಡ ಹರಿಹಾಯ್ದರು. ಕನಿಷ್ಟ ಪಕ್ಷ ಉಪಕಾರ ಇರಬೇಕು, ಸಿದ್ದರಾಮಯ್ಯಗೆ ಇದೆಲ್ಲಾ ಇಲ್ಲ, ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತ ತಿರುಗುತ್ತಿದ್ದಾರೆ. ಸಿದ್ದದ್ದರಾಮಯ್ಯ ಅವರ ದುರಂಹಕಾರ, ಅಧಿಕಾರದ ಮದ ಬಹಳ ದಿನ ಉಳಿಯುವುದಿಲ್ಲ ಎಂದೂ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಸೊಕ್ಕು ಮುರಿಯುವ ಶಕ್ತಿ ನನ್ನ ಕ್ಷೇತ್ರದ ಜನ ಕೊಟ್ಟಿದ್ದಾರೆ. ಎಲ್ಲೊ ಇದ್ದವರನ್ನು ತಂದು ರಾಜಕೀಯವಾಗಿ ಬೆಳೆಸಿದೆ. ಈಗ ಮೈಸೂರಿನಲ್ಲಿ ಜೆಡಿಎಸ್ ಸೋಲಿಸುತ್ತೇನೆ ಅಂತಾರೆ ನಾವೇನು ಕಡಬು ತಿನ್ನುತ್ತಾ ಕೂತಿರುತ್ತೇವಾ, ಕುಮಾರಸ್ವಾಮಿ ಸಿಎಂ ಅಗುವುದನ್ನು ತಪ್ಪಿಸಲು ಸಾಧ್ಯವಿಲ್ಲ, ರೇವಣ್ಣನ ಸೋಲಿಸಲು ಸಾಧ್ಯವಿಲ್ಲ ಎಂದು ದೇವೇಗೌಡ ಹೇಳಿದರು. 'ಎ' ಟೀಮ್, 'ಬಿ' ಟೀಮ್ ಅಂತಾರೆ ಸಿದ್ದರಾಮಯ್ಯ ಬನ್ನಿ ನಮ್ಮ ಶಕ್ತಿ ಏನು ಅಂತ ತೋರಿಸುತ್ತೇನೆ. ನಾನು, ಸೋನಿಯಾ ಗಾಂಧಿ ಸೇರಿ ಯಾರ ಹಂಗಿನಲ್ಲಿ ಇಲ್ಲ. ಮೈಸೂರು ಜಿಲ್ಲೆಯ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಎಂದು ದೇವೇಗೌಡ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ