ಐನಾತಿ ಮನೆಗಳ್ಳನ ಬಂಧನ

Notorious thief arrested

22-03-2018

ಬೆಂಗಳೂರು: ಕಂಪ್ಯೂಟರ್ ಸರ್ವೀಸ್ ಸೆಂಟರ್ನಲ್ಲಿ ವುಂಟಾದ ನಷ್ಟದಿಂದ ಮನೆಗಳ್ಳತನಕ್ಕಿಳಿದಿದ್ದ ಐನಾತಿ ಕಳ್ಳನೊಬ್ಬನನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ 42 ಲಕ್ಷ ಮೌಲ್ಯದ ಚಿನ್ನಾಭರಣ, ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬನಶಂಕರಿ 3ನೇ ಹಂತದ ಸಮೀರ್ ಶರ್ಮಾ ಅಲಿಯಾಸ್ ಸಮೀರ್ (32) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 42 ಲಕ್ಷ ಮೌಲ್ಯದ 1 ಕೆಜಿ 89 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, 17 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಂಜಾಬ್‍ನ ಜಲಂಧರ್ ಮೂಲದ ಆರೋಪಿಯು, ಕಳ್ಳತನ ಮಾಡುತ್ತಿದ್ದ ಮಾಲುಗಳನ್ನು ಕೊಳ್ಳುತ್ತಿದ್ದ ರಾಮ್‍ಬಾಬು ಎಂಬುವನನ್ನೂ ಕೂಡ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದರು.

ಪಂಜಾಬ್‍ನಿಂದ 2005ರಲ್ಲಿ ನಗರಕ್ಕೆ ಬಂದಿದ್ದ ಆರೋಪಿಯು ಆಲ್ ಅಮಿನ್ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿ ನಂತರ ಚಾಮರಾಜಪೇಟೆಯ ಐಐಎಂಡಿ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿ ಹೊಸಕೆರೆಹಳ್ಳಿಯಲ್ಲಿ ಎಸ್‍ಆರ್ ಕಂಪ್ಯೂಟರ್ ಸೆಂಟರ್ ಅಂಗಡಿ ತೆರೆದು, ಇಲ್ಲೇ ವಿವಾಹವಾಗಿ ನೆಲೆಸಿದ್ದ. ಅಂಗಡಿಯಲ್ಲಿ ಉಂಟಾದ ನಷ್ಟದಿಂದ ಕಳ್ಳತನಕ್ಕಿಳಿದಿದ್ದ ಆರೋಪಿಯು, ಕೋರಮಂಗಲ, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಇನ್ನಿತರ ಕಡೆಗಳಲ್ಲಿ ಮನೆ, ಅಪಾರ್ಟ್‍ಮೆಂಟ್, ಪಿಜಿಗಳನ್ನು ಗುರುತಿಸಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ.

ಕಳೆದ 2017ರ ಫೆಬ್ರವರಿಯಲ್ಲಿ ಆರೋಪಿಯನ್ನು ಬಂಧಿಸಿದ್ದ ಮಡಿವಾಳ ಪೊಲೀಸರು 72 ಲಕ್ಷ ಮೌಲ್ಯದ 151 ಲ್ಯಾಪ್‍ಟಾಪ್, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡು ಜೈಲಿಗೆ ಕಳುಹಿಸಿದ್ದರೂ 3ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತೆ ಕಳ್ಳತನಕ್ಕೆ ಇಳಿದಿದ್ದ ಎಂದು ತಿಳಿಸಿದರು. ಆರೋಪಿಯನ್ನು ಬಂಧಿಸುವಲ್ಲಿ ಡಿಸಿಪಿ ಡಾ. ಬೋರಲಿಂಗಯ್ಯ ನೇತೃತ್ವದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

computer laptop ಎಲೆಕ್ಟ್ರಾನಿಕ್ ನೇತೃತ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ