ಜಗತ್ಪ್ರಸಿದ್ದ ಐತಿಹಾಸಿಕ ಮೈಸೂರು ಅರಮನೆ ಬಳಿ ಆಕಸ್ಮಿಕ ಬೆಂಕಿ

Kannada News

12-05-2017

ಮೈಸೂರು: ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಅರಮನೆಯ ಟಿಕೆಟ್ ಕೌಂಟರ್ ಬಳಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದಿಂದ ಎಟಿಎಂ ಕೇಂದ್ರ ಹೊತ್ತಿ ಉರಿದಿದೆ. ಎಟಿಎಂ ಯಂತ್ರ ದುರಸ್ಥಿಗಾಗಿ ಸಿಬ್ಬಂದಿಗಳು ನಿನ್ನೆಯಷ್ಟೆ ಯಂತ್ರ ಕೊಂಡೊಯ್ದಿದ್ದರು ಎನ್ನಲಾಗಿದೆ. ಶಾಟ್ ಸರ್ಕ್ಯೂಟ್‌ನಿಂದಾಗಿ ಈ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಮೈಸೂರು ಅರಮನೆಯ ವರಾಹ ಗೇಟ್ ಬಳಿಯೇ ಈ ಘಟನೆ ನಡೆದಿದ್ದು  ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಘಟನೆಯಿಂದಾಗಿ ಅರಮನೆಯ ಗೋಡೆಗಳಿಗೂ ಹಾನಿಯಾಗಿದ್ದು  ಸುಟ್ಟು ಭಸ್ಮವಾಗಿರುವ ಎಟಿಎಂ ಕೇಂದ್ರದ ಬೆಂಕಿಯಿಂದ ಅರಮನೆಯ ಗೋಡೆ ಹಾಳಾಗಿದೆ. ಅರಮನೆ ಭದ್ರತಾ ಪೊಲೀಸ್ ಸಿಬ್ಬಂದಿಗಳಿಂದ ಘಟನಾ  ಸ್ಥಳದ ಪರಿಶೀಲನೆ ನಡೆಯುತ್ತಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ