ಭಾವಿ ಪತ್ನಿಗೆ ಖುಷಿಪಡಿಸಲು ಕಳ್ಳತನ

9 lakhs value gold theft: accused arrest

22-03-2018

ಬೆಂಗಳೂರು: ವಿವಾಹ ನಿಶ್ಛಯವಾಗಿದ್ದ  ಭಾವಿ ಪತ್ನಿಗೆ ಸ್ಕೂಟರ್, ಚಿನ್ನ ಕೊಡಿಸಿ ಖುಷಿಪಡಿಸಲು ಪ್ರಯಾಣಿಕರ ಪರ್ಸ್, ಬ್ಯಾಗ್‍ಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಜೆಸಿ ನಗರ ಪೊಲೀಸರು ಬಂಧಿಸಿ 9ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಭಟ್ಕಳದ ಶಹೀಂಫಿರ್‍ಜಾದೆ (23) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 9 ಲಕ್ಷ ಮೌಲ್ಯದ 310 ಗ್ರಾಂ ಚಿನ್ನಾಭರಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಟ್ರಾವೆಲ್ಸ್ ಒಂದರ ಬಸ್‍ನ ಚಾಲಕನಾಗಿದ್ದು, ಇತ್ತೀಚೆಗೆ ಭಟ್ಕಳ ಮೂಲದ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಭಾವಿ ಪತ್ನಿಗೆ ಸ್ಕೂಟರ್, ಚಿನ್ನಾಭರಣ ಕೊಡಿಸಿ ಖುಷಿಪಡಿಸಲು ತನ್ನ ಕೆಲಸದಿಂದ ಹಣ ಹೊಂದಿಸಲು ಸಾಧ್ಯವಾಗದೇ ಪ್ರಯಾಣಿಕರ ಸೋಗಿನಲ್ಲಿ ಕಳ್ಳತನಕ್ಕಿಳಿದಿದ್ದ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಆರೋಪಿಯು ಭಟ್ಕಳದಿಂದ ಬೆಂಗಳೂರಿಗೆ ಬರುವ ಬಸ್‍ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹತ್ತಿ ನಿದ್ದೆಗೆ ಜಾರಿದ ಪ್ರಯಾಣಿಕರ ಪರ್ಸ್ ಹಾಗೂ ಬ್ಯಾಗ್‍ಗಳನ್ನು ಕಳವು ಮಾಡಿ ಮುಂದಿನ ಬಸ್ ನಿಲ್ದಾಣದಲ್ಲಿಳಿದು ಪರಾರಿಯಾಗುತ್ತಿದ್ದ. ಪ್ರಗತಿ ಟ್ರಾವೆಲ್ಸ್ ಹಾಗೂ ಕುಮಾರ್ ಟ್ರಾವೆಲ್ಸ್‍ ಬಸ್‍ಗಳಲ್ಲಿ ಕಳ್ಳತನ ಮಾಡಿರುವುದನ್ನು ಆರೋಪಿಯು ಒಪ್ಪಿಕೊಂಡಿದ್ದು, ಈತನ ಬಂಧನದಿಂದ ಆರ್ಎಂಸಿ ಯಾರ್ಡ್ ಮತ್ತು ಕೊಡುಗೆಹಳ್ಳಿಯ ತಲಾ 1 ಸೇರಿದಂತೆ 2 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯನ್ನು ಜೆಸಿ ನಗರ ಪೊಲೀಸ್ ಇನ್ಸ್ಪೆ ಪೆಕ್ಟರ್ ಗಿರೀಶ್ ನಾಯಕ ಮತ್ತವರ ಸಿಬ್ಬಂದಿ ಬಂಧಿಸಿದೆ.


ಸಂಬಂಧಿತ ಟ್ಯಾಗ್ಗಳು

travels robbery ಭಟ್ಕಳ ಚಿನ್ನಾಭರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ