ಕ್ಯಾಬ್ ಚಾಲಕನ ಮೇಲೆ ಹಲ್ಲೆ

22-03-2018
ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಭಾಮೈದ ಎಂದು ಹೇಳಿಕೊಂಡು ದುಷ್ಕರ್ಮಿಯೊಬ್ಬ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ದುರ್ಘಟನೆ ಕೋರಮಂಗಲದಲ್ಲಿ ನಡೆದಿದ್ದು ದುಷ್ಕರ್ಮಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕೋರಮಂಗಲದ ಅಗರ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ಕಾರಿಗೆ ಜಾಗ ಬಿಡದ ಕಾರಣಕ್ಕೆ ಜಗಳ ತೆಗೆದ ದುಷ್ಕರ್ಮಿ, ಕ್ಯಾಬ್ ಚಾಲಕ ತಿಪ್ಪೇಸ್ವಾಮಿ ಎಂಬುವರ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ನಾನು ಶಾಸಕ ಸತೀಶ್ ರೆಡ್ಡಿಯ ಭಾಮೈದ ಎಂದು ಹೇಳಿ ಧಮ್ಕಿ ಹಾಕಿ ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಕೋರಮಂಗಲ ಪೊಲೀಸರು ದುಷ್ಕರ್ಮಿಗಾಗಿ ಶೋಧ ನಡೆಸಿದ್ದಾರೆ. ಈ ನಡುವೆ ಹಲ್ಲೆ ನಡೆಸಿದ ವ್ಯಕ್ತಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಸತೀಶ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ